ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಒಂದೇ ದಿನ ತಂದೆ, ಮಗ ಸಾವು

Published 30 ಏಪ್ರಿಲ್ 2024, 15:54 IST
Last Updated 30 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ಬೀದರ್‌: ನಗರದ ಗಾಂಧಿ ಗಂಜ್‌ ಹಿರಿಯ ವ್ಯಾಪಾರಸ್ಥ ಕಲ್ಯಾಣಪ್ಪ ಐನಾಪುರ ಹಾಗೂ ಅವರ ಮಗ ಸುದೇಶಬಾಬು ಒಂದೇ ದಿನ ಮೃತಪಟ್ಟಿದ್ದಾರೆ.

ಕಲ್ಯಾಣಪ್ಪ ಐನಾಪುರ (91) ಅವರ ಮಗ ಸುದೇಶಬಾಬು (56) ಮಂಗಳವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣಪ್ಪ ಅವರು ಸಂಜೆ ನಿಧನ ಹೊಂದಿದರು.

ಕಲ್ಯಾಣಪ್ಪ ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದಾರೆ. ಮೃತರಿಗೆ ಮೂರು ಜನ ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಾಲ್ಲೂಕಿನ ಯದಲಾಪುರದಲ್ಲಿ ಮಂಗಳವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಒಂದೇ ದಿನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿರುವ ಐನಾಪುರ ಪರಿವಾರದವರಿಗೆ ಬರಸಿಡಿಲು ಬಡಿದಂತಾಗಿದೆ.

ಸುದೇಶಬಾಬು
ಸುದೇಶಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT