ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು, ಕೊರೊನಾ ವಾರಿಯರ್ಸ್‌ಗೆ ಊಟ ವ್ಯವಸ್ಥೆ

ಚಿದ್ರಿ ಪರಿವಾರದಿಂದ ಊಟದ ವ್ಯವಸ್ಥೆ
Last Updated 19 ಮೇ 2021, 4:03 IST
ಅಕ್ಷರ ಗಾತ್ರ

ಹುಮನಾಬಾದ್: ರಾಜ್ಯ ಸರ್ಕಾರ ಮೇ 24ರ ವರೆಗೆ ಲಾಕ್‌ಡೌನ್ ಜಾರಿ ಮಾಡಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಮತ್ತು ಭಿಕ್ಷುಕರಿಗೆ ಹೊಟ್ಟೆ ತುಂಬಿಸುವ ಕಾರ್ಯವನ್ನು ರಾಮಚಂದ್ರನ್‌ ಚಿದ್ರಿ ಪರಿವಾರ ಮಾಡುತ್ತಿದೆ.

ಪ್ರತಿನಿತ್ಯ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೋಂಕಿತರಿಗೆ ಮತ್ತು ಸಿಬ್ಬಂದಿ ಸೇರಿದಂತೆ ಇನ್ನಿತರ ಸಾರ್ವಜನಿಕರಿಗೆ ಊಟ ಸರಬರಾಜು ಮಾಡಲಾಗುತ್ತಿದೆ. ಮೇ 10ರಿಂದ ಬೀದಿಯಲ್ಲಿ ವಾಸವಿರುವವರ ಆಹಾರ ನೀಡುವ ಕಾರ್ಯ ಮಾಡುತ್ತಿದೆ.

‘ಕೊರೊನಾ ಸೋಂಕಿತರ ಆರೈಕೆಯಲ್ಲಿ ನಿರತರಾಗಿರುವ ವಾರಿಯರ್ಸ್‌ಗಳಿಗೆ ಆಹಾರದ ಸಮಸ್ಯೆ ಆಗದಿರಲಿ ಎಂಬ ಕಾರಣಕ್ಕೆ ಉಚಿತವಾಗಿ ಊಟದ ಪೊಟ್ಟಣ ನೀಡಲಾಗುತ್ತಿದೆ’ ಎಂದು ಡಾ.ವಿಜಯಕುಮಾರ ಚಿದ್ರಿ ತಿಳಿಸಿದರು.

‘ಪ್ರತಿ ಮಧ್ಯಾಹ್ನ ಸೋಂಕಿತರಿಗೆ ಮತ್ತು ನಿರ್ಗತಿಕರಿಗೆ ಪ್ಯಾಕ್ ಮಾಡಲಾದ ಎರಡು ಚಪಾತಿ, ಪಲ್ಯೆ, ಅನ್ನ, ಸಾಂಬಾರು ನೀಡಲಾಗುತ್ತಿದೆ. ಪ್ರತಿದಿನ ಒಟ್ಟು 100 ಜನರಿಗೆ ಆಹಾರವನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಕರ್ಫ್ಯೂನಿಂದ ಪಟ್ಟಣ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಊಟ ಸಿಗುತ್ತಿಲ್ಲ. ಇದರಿಂದಾಗಿ ಕಳೆದ ಮೇ 10ರಿಂದ ಊಟ ವಿತರಿಸಲಾಗುತ್ತಿದೆ. ಮೇ 24ರ ವರೆಗೆ ನೀಡುವ ಯೋಜನೆ ಇದೆ’ ಎಂದರು.

'ಈ ಆಹಾರ ಪೂರೈಸಲು ಪಟ್ಟಣದ ಸ್ವಯಂ ಸೇವಕ ಸಂಘದ ಸದಸ್ಯರಾದ ವಿನಾಯಕ ಬಸವರಾಜ ಹಿರೇಮಠ, ಬಸವರಾಜ, ಸಿದ್ದು, ವಿಶಾಲ, ಮಾಹಾಂತೇಶ, ಮಲ್ಲಿಕಾರ್ಜುನ, ರಮೇಶ್, ಮಹಾದೇವ, ಅಮರ, ಮಾಣಿಕ ಆನಂದ ನೆರವಾಗುತ್ತಿದ್ದಾರೆ ಎಂದು ಡಾ.ವಿಜಯಕುಮಾರ್ ಚಿದ್ರಿ ಮಾಹಿತಿ ನೀಡಿದರು.

‘ಲಾಕ್‌ಡೌನ್‌ನಿಂದಾಗಿ ಆಹಾರ ಸಿಗುತ್ತಿಲ್ಲ. ಇಂತಹ ಕಷ್ಟದ ಕಾಲದಲ್ಲಿ ರಾಮಚಂದ್ರನ್‌ ಪರಿವಾರದಿಂದ ಕೋವಿಡ್ ವಾರಿಯರ್ಸ್‌ಗಳಿಗೆ ಪ್ರತಿನಿತ್ಯ ಆಹಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT