ಬಸವಕಲ್ಯಾಣ: ‘ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವವನ್ನು ಸಾರಿದ್ದಾರೆ. ಉಳ್ಳವರು ಇಲ್ಲದವರಿಗೆ ನೀಡುವ ಅವರ ದಾಸೋಹ ತತ್ವದ ಪಾಲನೆಯಾದರೆ ಜಗತ್ತಿನಲ್ಲಿ ಸುಖ ಶಾಂತಿ ನೆಲೆಸಬಲ್ಲದು’ ಎಂದು ಜಯಶಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೇನಾಗಾಂವದಲ್ಲಿ ಶನಿವಾರ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರಧಾನ್ಯದ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಶರಣರು ಬರೀ ವಚನ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದಂತೆಯೇ ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದರು. ಕೆಳ ವರ್ಗದವರನ್ನು ಮೇಲೆತ್ತಲು ಸತತವಾಗಿ ಶ್ರಮಿಸಿದರು. ಮುಖಂಡ ಶರಣು ಸಲಗರ ಕೂಡ ತಾಲ್ಲೂಕಿನಾದ್ಯಂತ 40 ಸಾವಿರಕ್ಕೂ ಹೆಚ್ಚಿನ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಿ ಪುಣ್ಯದ ಕಾರ್ಯ ಮಾಡಿದ್ದಾರೆ’ ಎಂದರು.

ಬಿಜೆಪಿ ಮುಖಂಡ ಶರಣು ಸಲಗರ, ಪಕ್ಷದ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಹಣಮಂತ ಧನಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಿರಾದಾರ, ಸುಮಿತ್ರಾ, ಗುರುನಾಥ ಮೂಲಗೆ, ಸದಾನಂದ ಪಾಟೀಲ ಮುಡಬಿ. ರತಿಕಾಂತ ಶಿರ್ಶಿವಾಡಿ, ಶಿವಾ ಕಲ್ಲೋಜಿ ಕೊಹಿನೂರ, ಜಗನ್ನಾಥ ಗದ್ಲೇಗಾಂವ್, ಮಹಾದೇವ ಪಾಟೀಲ, ನಾಗರಾಜ ದರ್ಜೆ, ಆಕಾಶ ಹಿರೇಮಠ, ಲೋಕೇಶ, ಅಂಕುಶ ಹಾಗೂ ಸುರೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.