ಬೀದರ್: ‘ಸಾರ್ವಜನಿಕ ಗಣೇಶ ಉತ್ಸವ ಅದ್ದೂರಿಯಾಗಿ ಆಚರಿಸಿ, ಆದರೆ ನಮ್ಮ ಸಂಭ್ರಮದಿಂದ ಯಾರಿಗೂ ಕೂಡ ತೊಂದರೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಗಣೇಶ ಮಹಾಮಂಡಳಿಯ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನಗರದ ಎಸ್ಪಿ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣೇಶ ಚತುರ್ಥಿ ಹಾಗೂ ಈದ್–ಮಿಲಾದ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಡೀ ದೇಶದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಉತ್ಸವ ಕೂಡ ಒಂದು. ಬೀದರ್ ಜಿಲ್ಲೆಯಲ್ಲೂ ಅಷ್ಟೇ ಸಂಭ್ರಮದಿಂದ ಆಚರಿಸಲಾಗುತ್ತದೆ. ಲಕ್ಷಾಂತರ ಜನ ಮೆರವಣಿಗೆ ನೋಡಲು ಸೇರುತ್ತಾರೆ. ಈ ವೇಳೆ ನೂಕಾಟ, ತಳ್ಳಾಟ ಆಗಿ ಯಾರಿಗೂ ತೊಂದರೆ ಆಗಬಾರದು. ಇದರ ಬಗ್ಗೆ ಗಣೇಶ ಮಂಡಳಿಯವರು ಎಚ್ಚರ ವಹಿಸಬೇಕು. ಪೊಲೀಸರು ಇರುವುದು ಜನರ ಸುರಕ್ಷತೆಗಾಗಿ. ಪ್ರತಿಯೊಬ್ಬರೂ ಗಣೇಶ ವಿಸರ್ಜನೆಯ ಮೆರವಣಿಗೆ ಕಣ್ತುಂಬಿಕೊಂಡು, ಸುರಕ್ಷಿತವಾಗಿ ಮನೆಗೆ ಮರಳಬೇಕು ಎನ್ನುವುದು ನಮ್ಮ ಸದಾಶಯ. ಆದಕಾರಣ ಕೆಲವು ಷರತ್ತುಗಳನ್ನು ಹಾಕಿರುತ್ತೇವೆ. ಅದನ್ನು ಎಲ್ಲರೂ ಚಾಚೂತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಗಣೇಶನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರುವವರು ನಿಗದಿತ ಸಮಯ ಪಾಲನೆಗೆ ಒತ್ತು ಕೊಡಬೇಕು. ಎಲ್ಲ ಮೂರ್ತಿಗಳು ನಿಗದಿತ ಅವಧಿಯೊಳಗೆ ಚೌಬಾರ ತಲುಪುವಂತೆ ನೋಡಿಕೊಳ್ಳಬೇಕು. ಅದಾದ ನಂತರ ಡಿಜೆ ಹಾಕಿಕೊಂಡು ಮುಂದುವರೆದರೆ ಯಾರಿಗೂ ತೊಂದರೆ ಆಗುವುದಿಲ್ಲ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗಣೇಶ ಮಹಾಮಂಡಳಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ಐದು ದಿನಗಳ ವರೆಗೆ ಗಣೇಶ ಉತ್ಸವ ಆಚರಿಸಲಾಗುತ್ತದೆ. ಆದರೆ, ಪ್ರತಿಸಲ ಸಮಸ್ಯೆ ತಲೆದೋರುವುದು ವಿಸರ್ಜನೆಯ ಸಂದರ್ಭದಲ್ಲಿ. ಎಲ್ಲರೂ ಸಮಯ ಪಾಲನೆ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸಹಕರಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಮಾತನಾಡಿ, ಈ ಹಿಂದೆ ಗಣೇಶ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದವು. ಈಗ ಅದೆಲ್ಲ ಕಣ್ಮರೆಯಾಗಿದೆ. ಹಿಂದಿನ ವೈಭವ ಮರುಕಳಿಸಲಿ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪುಜಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ ಇದ್ದರು.

‘ಆಸ್ಪತ್ರೆಯಿದ್ದರೆ ಡಿಜೆ ಬಂದ್ ಮಾಡಿ’

‘ಪ್ರತಿಯೊಬ್ಬರಿಗೂ ಸಾಮಾಜಿಕ ಬದ್ಧತೆ ಎನ್ನುವುದು ಇರಬೇಕು. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಗಣಪನ ಮೂರ್ತಿಯೊಂದಿಗೆ ದೊಡ್ಡ ದೊಡ್ಡ ಡಿಜೆಗಳನ್ನು ತರುತ್ತೀರಿ. ಆದರೆ ಆಸ್ಪತ್ರೆಗಳು ಇರುವ ಕಡೆಗಳಲ್ಲಿ ಬಂದ್ ಮಾಡಬೇಕು’ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದರು. ಆಸ್ಪತ್ರೆಗಳಲ್ಲಿ ವಿಧ ವಿಧವಾದ ರೋಗಿಗಳು ಇರುತ್ತಾರೆ. ಅವರು ಯಾವ ಪರಿಸ್ಥಿತಿಯಲ್ಲಿ ಇರುತ್ತಾರೋ ಗೊತ್ತಿಲ್ಲ. ಅವರಿಗೆ ತೊಂದರೆಯಾಗದ ರೀತಿಯಲ್ಲಿ ಡಿಜೆ ಹಚ್ಚಬೇಕು. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.

‘ತುರ್ತು ವಾಹನಗಳ ಓಡಾಟಕ್ಕೆ ಮುನ್ನೆಚ್ಚರಿಕೆ ಇರಲಿ’

‘ಗಣೇಶ ವಿಸರ್ಜನೆಯ ಮೆರವಣಿಗೆ ನೋಡಲು ಅಸಂಖ್ಯ ಜನ ಬರುತ್ತಾರೆ. ಯಾವುದೇ ತುರ್ತು ಸಂದರ್ಭ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅದರಲ್ಲೂ ಅಗ್ನಿಶಾಮಕ ದಳದ ವಾಹನ ಆಂಬುಲೆನ್ಸ್ ತಲುಪಲು ಮಾರ್ಗ ಗುರುತಿಸಿಕೊಂಡು ಆ ಮಾರ್ಗದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.

‘ಅನುಮತಿ ಪಡೆದು ಮರ ಕಡಿಯಿರಿ’

‘ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಪೆಂಡಾಲ್ ಹಾಕುವಾಗ ಮರ ಕಡಿಯುವ ಅನಿವಾರ್ಯತೆ ಎದುರಾದರೆ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡು ಮುಂದುವರೆಯಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಸಬಾರದು. ಆದಷ್ಟು ಪರಿಸರ ಸ್ನೇಹಿಯಾಗಿ ಗಣೇಶ ಉತ್ಸವ ಆಚರಿಸಬೇಕು ಎಂದು ತಿಳಿಸಿದರು.

‘ಗಣೇಶ ಉತ್ಸವದಲ್ಲಿ ಮುಸ್ಲಿಮರಿಂದ ಸಿಹಿ ವಿತರಣೆ’ ‘ಸೌಹಾರ್ದದ ಸಂದೇಶ ಸಾರಲು ಹೋದ ವರ್ಷ ಬಸವಕಲ್ಯಾಣದಲ್ಲಿ ನಡೆದ ಗಣೇಶ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮಾಜದಿಂದ ಸಿಹಿ ವಿತರಿಸಲಾಗಿತ್ತು. ಈ ಸಲವೂ ಮಾಡಲಿದ್ದೇವೆ. ಎಲ್ಲರೂ ಒಟ್ಟಿಗೆ ಕೂಡಿ ಇರೋಣ’ ಎಂದು ಯುವ ಮುಖಂಡ ಮುಹಮ್ಮದ್ ರಯೀಸ್ ತಿಳಿಸಿದರು.

‘ದ್ವೇಷ ಭಾಷಣ ಮಾಡುವವರನ್ನು ಕರೆಸದಿರಿ’

‘ಗಣೇಶ ಉತ್ಸವ ಸೌಹಾರ್ದತೆಯ ಪ್ರತೀಕ. ಈ ಉತ್ಸವಕ್ಕೆ ದ್ವೇಷ ಭಾಷಣ ಮಾಡುವವರನ್ನು ಕರೆಸಬಾರದು. ಇಲ್ಲವಾದರೆ ಎಲ್ಲಿಂದಲೋ ಬಂದು ನಮ್ಮೂರಿನ ವಾತಾವರಣ ಕೆಡಿಸಿ ಹೋಗುತ್ತಾರೆ’ ಎಂದು ನಿವೃತ್ತ ಪ್ರಾಚಾರ್ಯರೂ ಆದ ಮುಖಂಡ ಮುಹಮ್ಮದ್ ನಿಜಾಮುದ್ದೀನ್ ಹೇಳಿದರು. ಸಮಾಜ ಒಡೆಯುವ ಯಾವುದೇ ಸಂದೇಶಗಳಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡಬಾರದು. ಅದನ್ನು ಡಿಲೀಟ್ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

‘ಹೊಂಡದಲ್ಲಿ ಮೂರ್ತಿಗಳ ವಿಸರ್ಜನೆ’

‘ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಹಳ್ಳದಕೇರಿ ಕೆರೆಯಲ್ಲಿ ನಿರ್ಮಿಸಿರುವ ಹೊಂಡದಲ್ಲಿ ಈ ಸಲ ಐದು ಗಣೇಶನ ಮೂರ್ತಿಗಳನ್ನು ಸಾಂಕೇತಿಕವಾಗಿ ವಿಸರ್ಜಿಸಲಾಗುವುದು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಚಾಲನೆ ನೀಡುವರು’ ಎಂದು ಬಿಡಿಎ ಮಾಜಿ ಅಧ್ಯಕ್ಷರೂ ಆದ ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದರು. ಮುಂಬೈ ಹೈದರಾಬಾದ್ ಮಹಾನಗರದಲ್ಲಿ ಎರಡರಿಂದ ಮೂರು ದಿನಗಳವರೆಗೆ ಹಗಲು–ರಾತ್ರಿ ಗಣೇಶನ ಮೂರ್ತಿಗಳ ಮೆರವಣಿಗೆ ವಿಸರ್ಜನೆ ನಡೆಯುತ್ತದೆ. ಅಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಇಲ್ಲೇಕೆ ಆ ತರಹ ಮಾಡಲಾಗುತ್ತದೆ. ಕೋರ್ಟ್ ಅನವಶ್ಯಕವಾಗಿ ಹಬ್ಬಗಳಿಗೆ ತಡೆ ಒಡ್ಡಬಾರದು. ಜನರ ಭಾವನೆ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.