ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಅಲೆ ಎದುರಿಸಲು ಸಿದ್ಧರಾಗಿ

ಕೋವಿಡ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸಲಹೆ
Last Updated 10 ಜೂನ್ 2021, 5:56 IST
ಅಕ್ಷರ ಗಾತ್ರ

ಔರಾದ್: ‘ಕೋವಿಡ್ ಮೂರನೇ ಅಲೆ ಸೇರಿದಂತೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಬಂದರೆ ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗ ಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸಲಹೆ ನೀಡಿದರು.

ಬುಧವಾರ ತಾಲ್ಲೂಕಿನ ಸಂತಪುರ, ಧುಪತಮಹಾಗಾಂವ್, ಲಾಧಾ, ಬೆಳಕುಣಿ, ಕೌಠಾ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ವೈದ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

‘ಸದ್ಯ ಜಿಲ್ಲೆ ಕೋವಿಡ್‍ನಿಂದ ಪೂರ್ಣ ಮುಕ್ತಿ ಆಗಬೇಕಿದೆ. ಇದಕ್ಕಾಗಿ ಗ್ರಾಮೀಣ ಭಾಗದ ವೈದ್ಯರು, ಆಶಾ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಿದೆ’ ಎಂದರು.

‘ಮುಂದೆ ಕೋವಿಡ್ 3ನೇ ಅಲೆ ಬಂದಲ್ಲಿ ಅದು ಮಕ್ಕಳ ಮೇಲೂ ಪರಿಣಾಮ ಆಗುವ ಸಾಧ್ಯತೆ ಬಗ್ಗೆ ವೈದ್ಯರು ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಆರೈಕೆ ಕೇಂದ್ರ ಹಾಗೂ ಅಲ್ಲಿ ಆಮ್ಲಜನ ವ್ಯವಸ್ಥೆ ಇರಬೇಕು’ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

‘ಸೋಂಕು ಕಡಿಮೆಯಾಗಿದೆ ಎಂದು ಮೈಮರೆಯುವುದು ಬೇಡ. ಇನ್ನು ಗ್ರಾಮೀಣ ಭಾಗದಲ್ಲಿ ಜನ ಕೋವಿಡ್ ಬಾಧಿತರಾಗಿದ್ದಾರೆ. ಆಶಾ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸರ್ವೆ ಮಾಡಬೇಕು. ರೋಗ ಲಕ್ಷಣ ಕಂಡು ಬಂದವರಿಗೆ ತಪಾಸಣೆ ಮಾಡಿಸಬೇಕು. ಕೋವಿಡ್ ದೃಢಪಟ್ಟರೆ ಅವರನ್ನು ಆರೈಕೆ ಕೇಂದ್ರಗಳಿಗೆ ಕಳುಹಿಸಬೇಕು’ ಎಂದರು.

‘ಕೋವಿಡ್‌ ರೋಗ ಪೂರ್ಣ ತೊಲಗುವ ತನಕ ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಸುರಕ್ಷಿತ ಅಂತರ ಕಾಪಾಡಬೇಕು. ಮದುವೆಯಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರುವುದನ್ನು ತಡೆಯಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.

ವಿವಿಧ ಗ್ರಾಮ ಪಂಚಾಯಿತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು ಸಸಿ ನೆಟ್ಟರು. ಪ್ರತಿ ಪಂಚಾತಿಯವರು ಸಸಿ ನೆಡುವ ಅಭಿಯಾನ ಚುರುಕುಗೊಳಿಸಬೇಕು’ ಎದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿ.ಜಿ. ರೆಡ್ಡಿ, ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಶರಣಯ್ಯ ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸಿಡಿಪಿಒ ಶಂಭುಲಿಂಗ ಹಿರೇಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನೆ ಕೇರಿ, ಪಿಡಿಒ ಶಿವಾನಂದ ಔರಾದೆ, ಧುರೀಣ ಬಂಡೆಪ್ಪ ಕಂಟೆ, ಶ್ರೀಮಂತ ಪಾಟೀಲ, ಹೆಡಗಾಪುರ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ವಡಗಾಂವ್, ಖಂಡೋಬಾ ಕಂಗಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT