ಸೋಮವಾರ, ಡಿಸೆಂಬರ್ 5, 2022
21 °C
ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರ ಸ್ಪಷ್ಟನೆ

ಹುಮನಾಬಾದ್ | ಘಾಟಬೋರಾಳ ಗ್ರಾಪಂ ಹುಲಸೂರಿಗೆ ಬಿಟ್ಟುಕೊಡಲ್ಲ: ಗ್ರಾಮಸ್ಥರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಹುಲಸೂರ ತಾಲ್ಲೂಕಿಗೆ ಘಾಟಬೋರಾಳ ಗ್ರಾಮ ಪಂಚಾಯಿತಿ ಬಿಟ್ಟುಕೂಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರು ತಾಲ್ಲೂಕಿನ ಘಾಟಬೋರಾಳ ಗ್ರಾಮದಲ್ಲಿ ಶುಕ್ರವಾರ ಸಭೆ ನಡೆಸಿದರು.

ಗ್ರಾಮದ ಪ್ರಮುಖರು ಮಾತನಾಡಿ, ‘ಹುಲಸೂರ ತಾಲ್ಲೂಕಿಗೆ ಯಾವುದೇ ಕಾರಣಕ್ಕೂ ಘಾಟಬೋರಾಳ ಗ್ರಾಮ ಪಂಚಾಯಿತಿ ಬಿಟ್ಟುಕೂಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ನೂತನ ತಾಲ್ಲೂಕು ಘೋಷಣೆ ಮಾಡಬೇಕಾದರೆ ಘಾಟಬೋರಾಳ ಮಾಡಲಿ ಅಥವಾ ಹುಮನಾಬಾದ್ ತಾಲ್ಲೂಕಿನಲ್ಲಿಯೇ ಮುಂದುವರಿಸಬೇಕು.‌ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಾರ್ಥ ಮಾತನಾಡಿ, ‘ಈಗಾಗಲೇ ಸಂಸದ, ಶಾಸಕರಿಗೆ ಮನವಿಪತ್ರ ನೀಡಲಾಗಿದೆ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೂ ಸಹ ಮನವಿಪತ್ರ ಸಲ್ಲಿಸಲಾಗಿದೆ. ಯಾವುದೇ ಸ್ಪಂದನೆ ಸಿಗದಿದ್ದಲ್ಲಿ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಚಲೋ ಹೋರಾಟ ನಡೆಸ ಬೇಕಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಪ್ರಕಾಶ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಅಭಿಜೀತ್‌ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಮುರುಗೆಪ್ಪ ವಸ್ತ್ರದ್, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‍ಐ ಮಂಜನಗೌಡ ಪಾಟೀಲ, ಜ್ಞಾನೇಶ್ವರ ಭೋಸ್ಲೆ, ರಂಜೀತ ಮಾನಕರೆ, ರಾಜಕುಮಾರ ಪಾಟೀಲ, ಶಿವಾಜಿ ರಘು, ಸಾಯಿಕುಮಾರ ಹಡಗೆ, ಅಭಿಮನ್ಯು ನಿರಗುಡೆ, ವಿಷ್ಣು ಜಮಾದಾರ, ಗೋರಖ ಸಾಗರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.