ಮಂಗಳವಾರ, ಜೂನ್ 28, 2022
28 °C
ಮಾನವೀಯ ಗುಣ ಬೆಳೆಸಿಕೊಳ್ಳಲು ಪಿಎಸ್‍ಐ ಸಲಹೆ

250 ಕುಟುಂಬಗಳಿಗೆ ಘೋಡ್ಕೆ ಫೌಂಡೇಶನ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಸಂತಪುರನ ಸಾಯಿಕುಮಾರ ಘೋಡ್ಕೆ ಹಾಗೂ ಸತೀಶಕುಮಾರ ಘೋಡ್ಕೆ ಸಹೋದರರು ಲಾಕ್‍ಡೌನ್ ಸಂತ್ರಸ್ತ ಕುಟುಂಬಗಳಿಗೆ ಮಂಗಳವಾರ ಆಹಾರದ ಕಿಟ್ ವಿತರಿಸಿದರು.

ತಮ್ಮ ತಂದೆ ದಿವಂಗತ ಪಂಢರಿನಾಥ ಘೋಡ್ಕೆ ಅವರ ಜನ್ಮದಿನದ ಅಂಗವಾಗಿ ಈ ಸಹೋದರರು ಸಂತಪುರ, ಜೋಜನಾ, ಮಸ್ಕಲ್, ಬೆಳಕುಣಿ (ಚೌ) ಗ್ರಾಮದ ಗುಡಿಸಲುವಾಸಿಗಳು, ಕೂಲಿ ಕಾರ್ಮಿಕರನ್ನು ಗುರುತಿಸಿ ತಲಾ 5 ಕೆಜಿ.ಯ ದಿನಸಿ ಕಿಟ್ ವಿತರಿಸಿದರು.

ಸಂತಪುರನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ಕಿಟ್ ವಿತರಿಸಿ, ‘ಘೋಡ್ಕೆ ಕುಟುಂಬ ಮಾನವೀಯ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ. ಇಂತಹ ಸಂಷ್ಟದ ಸಮಯದಲ್ಲಿ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು’ ಎಂದು ಹೇಳಿದರು.

ಪಿಎಸ್‍ಐ ಸಿದ್ಧಲಿಂಗ ಮಾತನಾಡಿ, ‘ಎಲ್ಲವನ್ನು ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ಅಕ್ಕಪಕ್ಕದ ಜನ ಸಂಕಷ್ಟದಲ್ಲಿರುವಾಗ ಅವರಿಗೆ ಒಂದಿಷ್ಟು ಸಹಾಯ ಮಾಡುವ ಮಾನವೀಯ ಗುಣ ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದರು.

ವಕೀಲ ಬಿ.ಸಿ. ಕರ್ಸೆ ಮಾತನಾಡಿದರು. ಸಂತಪುರ ಗ್ರಾಪಂ. ಅಧ್ಯಕ್ಷ ಅನೀಲ ದೊಡ್ಮನಿ, ಧುರೀಣ ಶಿವಕುಮಾರ ಪಾಟೀಲ, ಬೆಳಕುಣಿಯ ಮಸರತ ಪಟೇಲ್, ವಾಜೀದ್ ದೇಶಮುಖ, ಸಿದ್ದಣ್ಣ ಬ್ಯಾಳೆ, ಅಮ್ಜದ್ ಪಠಾಣ್, ಗುಂಡುರಾವ ಚಿದ್ರಿ, ಎಸ್.ಆರ್. ಪಾಟೀಲ, ಸಿದ್ದರಾಮ ಪಾಟೀಲ, ಇಸ್ಮಾಯಿಲ್ ದಸ್ತಗಿರ್, ಸುಕುಮಾರ ಸಾಳೆ ಹಾಗೂ ಸಾಯಿಕುಮಾರ ಘೋಡ್ಕೆ, ಸತೀಶ ಘೋಡ್ಕೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.