ಹುಲಸೂರ: ತಾಲ್ಲೂಕು ಆಡಳಿತದ ಶಕ್ತಿ ಕೇಂದ್ರ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಆರೇಳು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಆಡಳಿತ ಜಡ್ಡುಗಟ್ಟಿದೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ-ಕಾರ್ಯಗಳಿಗೆ ನಿತ್ಯ ಕಚೇರಿಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕ ದಾಖಲೆ ವಿಭಾಗ, ಆರ್ಆರ್ಟಿ, ಎಸ್ಟಿಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಇಲ್ಲಿನ ಸಿಬ್ಬಂದಿ 6–7 ವರ್ಷಗಳಿಂದ ವರ್ಗಾವಣೆ ಆಗಿಲ್ಲ. ಸುದೀರ್ಘ ಅವಧಿಗೆ ಇಲ್ಲಿಯೇ ಇರುವುದರಿಂದ ಸಿಬ್ಬಂದಿಗೆ ಪ್ರಭಾವಿಗಳಾಗಿದ್ದು, ಪ್ರಶ್ನಿಸುವವರು ಇಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಹಶೀಲ್ದಾರ್ ಕಚೇರಿಯ ಬಹುತೇಕ ಸಿಬ್ಬಂದಿ ನಿತ್ಯ ಬಸವಕಲ್ಯಾಣದಿಂದ ಬರುತ್ತಾರೆ. ಸಮಯ ಪಾಲನೆ ಮಾಡುವುದಿಲ್ಲ. ಬೆಳಿಗ್ಗೆ 11 ಗಂಟೆ ನಂತರ ಒಬ್ಬೊಬ್ಬರಾಗಿ ಕಚೇರಿಗೆ ಬರುತ್ತಾರೆ. ಮಧ್ಯಾಹ್ನ 1 ಗಂಟೆ ವೇಳೆಗೆ ಊಟಕ್ಕೆ ತೆರಳುತ್ತಾರೆ. 4 ಗಂಟೆಗೆ ಊರಿಗೆ ಮರಳುವ ತರಾತುರಿಯಲ್ಲಿ ಇರುತ್ತಾರೆ. ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ಎಲ್ಲಾ ವಿಭಾಗಗಳಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯ ಕುರ್ಚಿಗಳು ಖಾಲಿ ಇರುತ್ತವೆ. ಅವರು ಯಾವಾಗ ಬರುತ್ತಾರೋ, ಯಾವಾಗ ವಾಪಸ್ ಹೋಗುತ್ತಾರೋ ತಿಳಿಯುವುದಿಲ್ಲ. ಹಲವು ವರ್ಷಗಳಿಂದ ಬಹುತೇಕ ಸಿಬ್ಬಂದಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಸಿಬ್ಬಂದಿಯನ್ನು ಕೇಳಿದರೆ ಸಾಹೇಬರು ಫೀಲ್ಡಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ನಿತ್ಯ ಹಳ್ಳಿಗಳಿಂದ ಬರುವವರು ಅಹವಾಲು ಕೇಳುವವರಿಲ್ಲದೇ ಬರಿಗೈಲಿ ಹಿಂದಿರುಗುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಾರ ಸೌಧಗಾರ ದೂರಿದರು.

ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಹಲವು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಹಳೆಯ ಪಹಣಿ, ಮ್ಯುಟೇಷನ್ ಮುಂತಾದ ಭೂ ದಾಖಲೆಗಳು ಸೇರಿ ಸಣ್ಣಪುಟ್ಟ ಕೆಲಸಗಳಿಗೂ ಕೆಲ ಸಿಬ್ಬಂದಿ ಹಣ ಕೇಳುತ್ತಾರೆ. ಹಣ ಕೊಡದಿದ್ದಲ್ಲಿ ಕೆಲಸ ಮಾಡದೆ ವಿನಾಃಕಾರಣ ಸತಾಯಿಸುತ್ತಾರೆ. ರೈತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ರೈತರದ್ದಾಗಿದೆ.

‘ರೈತರ ಜಮೀನುಗಳಿಗೆ ಸಂಬಂಧಿಸಿದ ಪಹಣಿ ತಿದ್ದುಪಡಿ, ಮ್ಯುಟೇಷನ್, ಬ್ಯಾಂಕ್ ಸಾಲ ಮುಕ್ತಿ, ಹಕ್ಕು ಬದಲಾವಣೆ ಇತ್ಯಾದಿ ಕೆಲಸಗಳಿಗೆ ಹಣ ನೀಡಿದರೆ ಮಾತ್ರ ನೀತಿ, ನಿಯಮಗಳಿಲ್ಲದೆ ಬೇಗ ಕೆಲಸ ಮಾಡಿಕೊಡುತ್ತಾರೆ. ಒಂದು ವೇಳೆ ಕಾಗದ ಪತ್ರಗಳು ಎಷ್ಟೇ ಸರಿಯಾಗಿದ್ದರೂ ಹಣ ಕೊಡದೆ ಹೋದರೆ ಕಾಲಹರಣ ಮಾಡಿ ಇಲ್ಲಸಲ್ಲದ ನೆಪ ಹೇಳಿ ಅರ್ಜಿ ತಿರಸ್ಕರಿಸುತ್ತಾರೆ’ ಎಂದು ಪ್ರತ್ಯಕ್ಷದರ್ಶಿಗಳು ಆಪಾದಿಸಿದ್ದಾರೆ.

5 ವರ್ಷ ಮೀರಿದ ಸಿಬ್ಬಂದಿ ವಿವರ ಕೇಳಿದ ಸರ್ಕಾರಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಕಚೇರಿಯಲ್ಲಿ ಜನರಿಗೆ ಲಭ್ಯರಾಗಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದೇ ಸ್ಥಳದಲ್ಲಿ 5 ವರ್ಷ ಮೀರಿ ಸೇವೆಯಲ್ಲಿದ್ದರೆ, ದೂರುಗಳಿದ್ದಲ್ಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ಬಗ್ಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಆದೇಶಿಸಿದೆ.

‘ತಹಶೀಲ್ದಾರ್ ಕಚೇರಿಯಲ್ಲಿ 5 ವರ್ಷಕ್ಕೂ ಮೀರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಕುರಿತು ಸರ್ಕಾರಕ್ಕೆ ವಿವರವಾದ ವರದಿ ಕಳುಹಿಸಲಾಗಿದೆ’ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.