ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರ್ ಘರ್ ತಿರಂಗಾ: ಭವ್ಯ ಮೆರವಣಿಗೆ ಬೈಕ್ ರ‍್ಯಾಲಿ

Published 14 ಆಗಸ್ಟ್ 2024, 14:11 IST
Last Updated 14 ಆಗಸ್ಟ್ 2024, 14:11 IST
ಅಕ್ಷರ ಗಾತ್ರ

ಔರಾದ್: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬುಧವಾರ ಪಟ್ಟಣದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ಸಾರ್ವಜನಿಕರು ಕೈಯಲ್ಲಿ ಧ್ವಜ ಹಿಡಿದು ಭಾರತ ಮಾತಾಕೀ ಜೈ ಎಂಬ ಘೋಷಣೆ ಮೊಳಗಿಸಿದರು.

ಪಟ್ಟಣದ ಕನ್ನಡಾಂಬೆ ವೃತ್ತದಿಂದ ಮೆರವಣಿಗೆ ನಡೆಯಿತು. ದೇಶಭಕ್ತಿ ಗೀತೆ ಮೊಳಗುತ್ತಿದ್ದಂತೆ ಎಲ್ಲರೂ ಮೈಮರೆತು ಕುಣಿದರು. 

ಶಾಸಕ ಪ್ರಭು ಚವಾಣ್, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಪಿಆರ್‌ಇ ಎಂಜಿನಿಯರ್ ವೆಂಕಟ ಸಿಂಧೆ, ಸುಭಾಷ, ತಾಲ್ಲೂಕು ಸಮಾಜ ಕಲ್ಯಾಣಧಿಕಾರಿ ಅನೀಲಕುಮಾರ ಮೇಲ್ದೊಡ್ಡಿ, ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ಮುಖಂಡ ಅಶೋಕ ಶೆಂಬೆಳ್ಳಿ, ಪ್ರತಿಕ್ ಚವಾಣ್, ರತ್ನದೀಪ ಕಸ್ತೂರೆ ಪಾಲ್ಗೊಂಡಿದ್ದರು.

ಬೈಕ್ ರ‍್ಯಾಲಿ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಬಿಜೆಪಿ ವತಿಯಿಂದ ನಡೆದ ಬೈಕ್ ರ‍್ಯಾಲಿಗೆ ಶಾಸಕ ಪ್ರಭು ಚವಾಣ್ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ಕಿರಣ ಪಾಟೀಲ, ಶಿವರಾಜ ಅಲ್ಮಾಜೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡ ವಸಂತ ಬಿರಾದಾರ, ಖಂಡೋಬಾ ಕಂಗಟೆ, ರಾಮ ನರೋಟೆ, ಶಿವಾಜಿರಾವ ಪಾಟೀಲ, ಅಶೋಕ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಶಿವಾಜಿರಾವ ಕಾಳೆ, ಪ್ರತೀಕ್ ಚವಾಣ್, ಸಚಿನ್ ರಾಠೋಡ್, ದಯಾನಂದ ಘೂಳೆ, ಸಂಜು ವಡೆಯರ್, ಗುರುನಾಥ ರಾಜಗೀರಾ, ಗುಂಡಪ್ಪ ಮುದಾಳೆ, ಅಶೋಕ ಶೆಂಬೆಳ್ಳೆ ಇದ್ದರು.

ಬೈಕ್ ರ‍್ಯಾಲಿಗೂ ಮುನ್ನ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ನಿವೃತ್ತ ಯೋಧರನ್ನು ಗೌರವಿಸಲಾಯಿತು.

ಔರಾದ್ ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ಬಿಜೆಪಿ ವತಿಯಿಂದ ಬೈಕ್ ರ‍್ಯಾಲಿ ನಡೆಯಿತು
ಔರಾದ್ ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ಬಿಜೆಪಿ ವತಿಯಿಂದ ಬೈಕ್ ರ‍್ಯಾಲಿ ನಡೆಯಿತು
ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಶಾಸಕ ಪ್ರಭು ಚವಾಣ್ ಸನ್ಮಾನಿಸಿದರು
ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಶಾಸಕ ಪ್ರಭು ಚವಾಣ್ ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT