ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ನಾಲ್ಕು ಮೇಕೆ ಸಾವು

Published 12 ಮೇ 2024, 15:47 IST
Last Updated 12 ಮೇ 2024, 15:47 IST
ಅಕ್ಷರ ಗಾತ್ರ

ಇಸ್ಲಾಂಪುರ (ಜನವಾಡ): ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಿಡಿಲು ಬಡಿದು ನಾಲ್ಕು ಮೇಕೆಗಳು ಮೃತಪಟ್ಟಿವೆ.

ಇಸ್ಲಾಂಪುರ ತಾಂಡಾದ ಭೀಮ ಬನ್ಸಿ ಅವರು ಮೇಕೆ ಮೇಯಿಸಲು ಹೊಲಕ್ಕೆ ಹೋದಾಗ ಬಿರುಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಮೇಕೆಗಳು ಮೃತಪಟ್ಟಿವೆ.

ನಾಲ್ಕು ಆಡುಗಳ ಅಂದಾಜು ಮೌಲ್ಯ ಸುಮಾರು ₹60 ಸಾವಿರ ಎಂದು ಮಾಲೀಕ ಭೀಮ ಬನ್ಸಿ ತಿಳಿಸಿದ್ದಾರೆ.

ಭೀಮ ಬನ್ಸಿ ಅವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಗ್ರಾಮದ ಸಂಗಮೇಶ ಕೌಟಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT