ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜು

ಇಂದಿನಿಂದ ಮೂರು ದಿನ ವಿವಿಧ ಕಾರ್ಯಕ್ರಮ
Last Updated 6 ಜನವರಿ 2023, 15:41 IST
ಅಕ್ಷರ ಗಾತ್ರ

ಬೀದರ್: ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜುಗೊಂಡಿವೆ. ನಗರದ ಎಲ್ಲೆಡೆ ಉತ್ಸವದ ವೈಶಿಷ್ಟ ಪರಿಚಯಿಸುವ ಹಾಗೂ ಸಾರ್ವಜನಿಕರಿಗೆ ಸ್ವಾಗತ ಕೋರುವ ಕಟೌಟ್, ಬ್ಯಾನರ್ ಹಾಗೂ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಶನಿವಾರ (ಜ.7) ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರದ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನೀಲಕುಮಾರ ಘನ ಉಪಸ್ಥಿತಿ, ಶಾಸಕ ರಹೀಂಖಾನ್ ಅಧ್ಯಕ್ಷತೆ ವಹಿಸುವರು.

ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇಂದು ಏನೇನು?
ಸಂಜೆ 5.30ಕ್ಕೆ ಬೀದರ್‍ನ ಕಲಾವಿದೆ ಭಾನುಪ್ರಿಯಾ ಅರಳಿ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ 5.40ಕ್ಕೆ ರಮೇಶ ಕೊಳಾರ ಹಾಗೂ ತಂಡದಿಂದ ಗಜಲ್ ಗಾಯನ, ಸಂಜೆ 5.50ಕ್ಕೆ ಬಸವರಾಜ ಶೀಲವಂತ ಮತ್ತು ತಂಡದಿಂದ ವಚನ ಗಾಯನ, ಸಂಜೆ 6ಕ್ಕೆ ರಾಮಲು ಗಾದಗಿ ಹಾಗೂ ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂಜೆ 6.10ಕ್ಕೆ ಹುಮನಾಬಾದ್‍ನ ಜನಾರ್ಧನ್ ವಾಘಮಾರೆ ಮತ್ತು ತಂಡದಿಂದ ತಬಲಾ ಸೋಲೊ, ಸಂಜೆ 6.20ಕ್ಕೆ ಬೀದರ್‍ನ ಬೆಳಗು ಸಾಂಸ್ಕøತಿಕ ಹಾಗೂ ಸಾಮಾಜಿಕ ಟ್ರಸ್ಟ್ ತಂಡದಿಂದ ಕನ್ನಡ, ಹಿಂದಿ ಚಲನಚಿತ್ರ ಗೀತೆಗಳ ಗಾಯನ, ಸಂಜೆ 6.30ಕ್ಕೆ ಬಸವಕಲ್ಯಾಣದ ಮಧುಕರ ಘೋಡ್ಕೆ ಮತ್ತು ತಂಡದಿಂದ ತತ್ವಪದ ಗಾಯನ, ಸಂಜೆ 6.40ಕ್ಕೆ ಕೋಲಾರದ ಪಿಚ್ಚಳಿ ಶ್ರೀನಿವಾಸ ಹಾಗೂ ತಂಡದಿಂದ ಜಾನಪದ ಗಾಯನ, ಸಂಜೆ 6.50ಕ್ಕೆ ಮೈಸೂರಿನ ಕೆ.ವಿ.ಎಸ್. ಕಲಾ ತಂಡದಿಂದ ನೃತ್ಯ ರೂಪಕ, ಸಂಜೆ 7.10ಕ್ಕೆ ಬೀದರ್‍ನ ರೇಖಾ ಅಪ್ಪಾರಾವ್ ಸೌದಿ ಮತ್ತು ತಂಡದಿಂದ ಚಲನಚಿತ್ರ ಗೀತೆ ಗಾಯನ, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಾಯೋಜಕತ್ವದ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.

ರಾತ್ರಿ 7.30ಕ್ಕೆ ಕಾಶ್ಮೀರದ ಶ್ರೀನಗರದ ಇಫ್ರಾ ಅಯುಬ್ ಖಾನ್ ಲಚಮನಪೂರಾರಿಂದ ರೂಫ್ ಡ್ಯಾನ್ಸ್, ರಾತ್ರಿ 8ಕ್ಕೆ ಬೆಂಗಳೂರಿನ ಸಂಜೀತ ಹೆಗಡೆ ಅವರಿಂದ ಸಂಗೀತ ಸಂಜೆ ಜರುಗಲಿದೆ. ರಾತ್ರಿ 10ಕ್ಕೆ ಜೈಪುರದ ಸಾಬರಿ ಸಹೋದರರು ಕವ್ವಾಲಿ ನಡೆಸಿಕೊಡಲಿದ್ದಾರೆ.

ನಾಳೆ ಏನೇನು?
ಜ. 8 ರಂದು ಸಂಜೆ 5.30ಕ್ಕೆ ಬೀದರ್‍ನ ವೃಕುಂಠ ದತ್ತ ಮಹಾರಾಜ ಮತ್ತು ತಂಡದಿಂದ ಕಥಾ ಕೀರ್ತನ, ಸಂಜೆ 5.40ಕ್ಕೆ ದಿಲೀಪ್ ಕಾಡವಾದ ಹಾಗೂ ತಂಡದಿಂದ ಸುಗಮ ಸಂಗೀತ, ಸಂಜೆ 5.50ಕ್ಕೆ ಶಂಭುಲಿಂಗ ವಾಲ್ದೊಡ್ಡಿ ಮತ್ತು ತಂಡದಿಂದ ಜಾನಪದ ಗಾಯನ, ಸಂಜೆ 6ಕ್ಕೆ ರಾಜೇಂದ್ರ ಸಿಂಗ್ ಪವಾರ್ ಹಾಗೂ ತಂಡದಿಂದ ಹಾರ್ಮೋನಿಯಂ ಸೋಲೊ, ಸಂಜೆ 6.10ಕ್ಕೆ ಉಷಾ ಪ್ರಭಾಕರ ಮತ್ತು ತಂಡದಿಂದ ಭರತನಾಟ್ಯ, ಸಂಜೆ 6.20ಕ್ಕೆ ಗೀತಾ ಹಾಗೂ ತಂಡದಿಂದ ವಿಶಿಷ್ಟ ಸಮೂಹ ನೃತ್ಯ, ಸಂಜೆ 6.30ಕ್ಕೆ ರಘು ಪ್ರಿಯಾ ಮತ್ತು ತಂಡದಿಂದ ಹಾಸ್ಯ, ಸಂಜೆ 6.40ಕ್ಕೆ ಮಂಜುನಾಥ ಜಲಸಂಗಿ ಅವರಿಂದ ಸುಗಮ ಸಂಗೀತ, ಸಂಜೆ 7ಕ್ಕೆ ಚಿಕ್ಕಬಳ್ಳಾಪುರದ ನಿರ್ಮಲಾ ಹಾಗೂ ತಂಡದಿಂದ ಜಾನಪದ ಗಾಯನ, ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯದ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಪ್ರಾಯೋಜಕತ್ವದ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.

ರಾತ್ರಿ 7.30ಕ್ಕೆ ಪಂಜಾಬ್‍ನ ಗುರದರಹನ್ ಸಿಂಗ್ ಮಲ್ವಾ ಸಭ್ಯಾಚರಕ ಕ್ಲಬ್ ಪಟಿಯಾಲಾದಿಂದ ಪಂಜಾಬಿ ಭಾಂಗಡಾ ಡಾನ್ಸ್, ರಾತ್ರಿ 7.45ಕ್ಕೆ ಮುಂಬೈನ ಮಹಾರಾಷ್ಟ್ರ-ಸುರಭಿ ಕಾಳಿದಾಸ ಮನಸಾಳೆಯಿಂದ ಲಾವಣಿ ನೃತ್ಯ, ರಾತ್ರಿ 8ಕ್ಕೆ ಖ್ಯಾತ ಗಾಯಕಿ ಮಂಗಲಿ, ಅನುರಾಧಾ ಭಟ್ ಹಾಗೂ ವೀರ ಸಮರ್ಥ ತಂಡದಿಂದ ಸಂಗೀತ ಸಂಜೆ ಹಾಗೂ ರಾತ್ರಿ 10.30ಕ್ಕೆ ಖ್ಯಾತ ಗಾಯಕ ಕುಮಾರ ಸಾನು ಅವರಿಂದ ಹಿಂದಿ ಗೀತೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT