ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ವಿವಿಧೆಡೆ ಸಾಗರ ಖಂಡ್ರೆ ಮತಯಾಚನೆ

Published 27 ಮಾರ್ಚ್ 2024, 16:15 IST
Last Updated 27 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಹುಲಸೂರ: ಸಮೀಪದ ಸಾಯಗಾಂವ್ ಹೋಬಳಿಯ ಅಟ್ಟರಗಾ ಸೇರಿದಂತೆ ಇತರ ಗ್ರಾಮಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ  ಬುಧುವಾರ ಮತಯಾಚನೆ ಮಾಡಿದರು.

ಮೇಹಕರ, ಅಳವಾಯಿ, ಹಲಸಿ ತುಗಾಂವ್, ವಾಂಝರಖೆಡ, ಇಂಚುರ, ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ‘ಕ್ಷೇತ್ರದ ಅಭಿವೃದ್ಧಿಗಾಗಿ ಒಮ್ಮೆ ಅವಕಾಶ ನೀಡಿ’ ಎಂದು ಕೋರೊದರು.

ಬಳಿಕ ಮಾತನಾಡಿದ ಕಾಂಗ್ರೆಸ್ ತಾಲ್ಲೂಕ ಅಧ್ಯಕ್ಷ ಹನುಮಂತರಾವ ಚವ್ಹಾಣ, ‘ಕಾಂಗ್ರೆಸ್ ಹಿಂದುಳಿದ, ಅಲ್ಪಸಂಖ್ಯಾತರ ಪರವಾದ ಪಕ್ಷ. ಸಾಗರ ಖಂಡ್ರೆ ಕ್ರಿಯಾಶೀಲ ವ್ಯಕ್ತಿಯಾಗಿ, ಸಮಯ ವ್ಯರ್ಥ ಮಾಡದಂತೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಸಾಗರ ಖಂಡ್ರೆ ಮಾತನಾಡಿ, ‘ಭಾಲ್ಕಿ ತಾಲೂಕಿಗೆ ₹225 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ನಡಿತ್ತಿವೆ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ದೂರದೃಷ್ಟಿ ಇದ್ದು ತಂದೆ ಈಶ್ವರ ಖಂಡ್ರೆ ಅವರ ಮಾದರಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪವಿದೆ. ಬೀದರ್ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅವಕಾಶ ನೀಡಬೇಕು’ ಎಂದರು.

ಮೆಹಕರ್ ಗ್ರಾಮದಲ್ಲಿ ಅದ್ಧೂರಿ ಸ್ವಾಗತ: ಬೀದರ್ ಲೋಕಸಭಾ ಕ್ಷೇತ್ರದ ಕಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೆಹಕರ್ ಗ್ರಾಮಕ್ಕೆ ಆಗಮಿಸಿದ ಸಾಗರ ಖಂಡ್ರೆ ಅವರನ್ನು ಪುಷ್ಟವೃಷ್ಟಿ ಮಾಡಿ ಸ್ವಾಗತಿಸಲಾಯಿತು. ಬಿಜೆಪಿ ಮುಖಂಡ ರಾಜಕುಮಾರ ಗಂದಗೆ ಸೇರಿ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.‌

ಈ ಸಂದರ್ಭದಲ್ಲಿ ಯುವ ಮುಖಂಡ ಪ್ರವೀಣ ಹನುಮಶೆಟ್ಟಿ, ದಿಲೀಪ ಪಾಟೀಲ, ಮಾರುತಿರಾವ ಮಗರ, ಅಳವಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಂಡೆರಾವ ಕಾಸರ, ಪ್ರವೀಣ ಸ್ವಾಮಿ, ರಾಜಕುಮಾರ ಉಜ್ವಲೆ,ಗಜಾನಂದ ಮೋಳಕೆರೆ,ಬಲಭೀಮ್ ಭಾಲ್ಕೆ, ಅಮೋಲ್ ಜಾದವ್, ವಿದ್ಯವಾನ್ ಮಂಗಣೆ, ಶರದ್ ಗಂದಗೆ, ನವನಾಥ ಬೊಲಸುರೆ , ಗೋಪಾಲ್ ಸೂರ್ಯವಂಶಿ ಸೇರಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಹುಲಸೂರ ತಾಲ್ಲೂಕಿನ ಮೆಹಕರ್ ಗ್ರಾಮದ ಬಿಜೆಪಿ ಮುಖಂಡರು ಸಾಗರ ಖಂಡ್ರೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಹುಲಸೂರ ತಾಲ್ಲೂಕಿನ ಮೆಹಕರ್ ಗ್ರಾಮದ ಬಿಜೆಪಿ ಮುಖಂಡರು ಸಾಗರ ಖಂಡ್ರೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT