ಮಾಲ್‌ನವರು ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದೊಡ್ಡದಾದ ಗುಂಡಿ ಅಗೆದು ಅದಕ್ಕೆ ಹೊಲಸು ನೀರು ಬಿಡುತ್ತಿದ್ದಾರೆ. ಆ ನೀರೆಲ್ಲ ಗುಮ್ಮೆ ಕಾಲೊನಿಗೆ ಬರುತ್ತಿದೆ. ಇದರಿಂದ ನಮ್ಮ ನೆಮ್ಮದಿ ಹಾಳಾಗಿದೆ
ಎಸ್.ಕೆ. ಸಾಥಿ ಸ್ಥಳೀಯ ನಿವಾಸಿ
ನಮ್ಮದು ಸೇರಿ ಕಾಲೊನಿಯ ಅನೇಕರ ಬಾವಿ ನೀರು ಕಲುಷಿತಗೊಂಡಿದೆ. ನಲ್ಲಿಗೂ ನೀರು ಬಿಡುತ್ತಿಲ್ಲ. ದುಡ್ಡು ಕೊಟ್ಟು ಹೊರಗಿನಿಂದ ನೀರು ತರುತ್ತಿದ್ದೇವೆ. ದುರ್ಗಂಧದಿಂದ ಮನೆಯಲ್ಲಿ ಇರಲಾಗುತ್ತಿಲ್ಲ
ಜಗದೇವಿ ಸ್ಥಳೀಯ ನಿವಾಸಿ
ಸತತ ಮಳೆ ಸುರಿಯುತ್ತಿರುವುದರಿಂದ ಹೊಲಸು ನೀರು ಹೆಚ್ಚಿನ ಪ್ರಮಾಣದಲ್ಲಿ ಕಾಲೊನಿಗೆ ಹರಿದು ಬರುತ್ತಿದೆ. ವರ್ಷವಿಡೀ ಹೀಗೆ ಆಗುತ್ತಿರುತ್ತದೆ. ಆದರೆ, ಮಳೆಗಾಲದಲ್ಲಿ ಇದರ ಪ್ರಮಾಣ ಹೆಚ್ಚು