ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ಹೊಲದಲ್ಲಿನ ತೊಗರಿಗೆ ತಗುಲಿರುವ ಕೀಟಬಾಧೆಯನ್ನು ಕೃಷಿ ಜಂಟಿ ನಿರ್ದೇಶಕಿ ದೇಲಿಕಾ ಪರೀಶೀಲನೆ ಮಾಡಿದರು. ಹುಮನಾಬಾದ್ ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಇದ್ದರು
ಮೋಡದ ವಾತಾವರಣ ಮತ್ತು ಮಂಜಿನಿಂದ ತೊಗರಿಗೆ ಕೀಟಬಾಧೆ ಹೆಚ್ಚುತ್ತದೆ. ತತ್ತಿನಾಶಕ ಓವಿಸೈಡ್ ರಾಸಾಯನಿಕ ಪ್ರೊಫೆನೊಫಾಸ್ ಸಣ್ಣ ಕೀಟಗಳು ಇದ್ದರೆ ಎಮಾಮೆಕ್ಟಿನ್ ಬೆಂಜೊಯೇಟ್ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು.
– ಶರಣಕುಮಾರ, ಸಹಾಯಕ ಕೃಷಿ ನಿರ್ದೇಶಕ ಹುಮನಾಬಾದ್
ಸಾಕಷ್ಟು ಖರ್ಚು ಮಾಡಿ ಉತ್ತಮವಾಗಿ ತೊಗರಿ ಬೆಳೆಸಲಾಗಿದೆ. ಈ ಬಾರಿ ಖರ್ಚು ಮಾಡಿದ ಹಣ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೋಡಕವಿದ ವಾತಾವರಣದಿಂದ ಕೀಟಬಾಧೆ ಕಾಡುತ್ತಿದೆ.