ಶನಿವಾರ, ಜೂನ್ 19, 2021
27 °C

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮನೆಮನೆಗೆ ಓಡಾಡಿ ಪಡಿತರ ಅಕ್ಕಿ ಖರೀದಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉದಗೀರ್‌ ಮುಸಾನಗರ ನಿವಾಸಿ ಗಳಾದ ಸಂಗಮೇಶ ಭಗವಾನ ಬಿರಾದಾರ (23), ಶೇಖ್ ಇಸಾ ಯೂನುಸ್ (27) ಬಂಧಿತರು.

‘ಟೆಂಪೊದಲ್ಲಿ 14 ಕ್ವಿಂಟಲ್ ಮತ್ತು ಒಮಿನಿ ಕಾರ್‌ನಲ್ಲಿ 3.5 ಕ್ವಿಂಟಲ್ ಅಕ್ಕಿ ಸೇರಿ ಅಂದಾಜು ₹49 ಸಾವಿರ ಮೌಲ್ಯದ ಒಟ್ಟು 17.5 ಕ್ವಿಂಟಲ್ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚೆಕ್‌ಪೋಸ್ಟ್ ಹತ್ತಿರ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಔರಾದ್ ತಾಲ್ಲೂಕಿನ ಆಹಾರ ಸಿರಸ್ತೇದಾರ ರವಿ ಅರ್ಜುನರಾವ ಸೂರ್ಯವಂಶಿ ಅವರ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು