ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಧರ್ಮ ಪೀಠದಲ್ಲಿ ಜಗಳ: ಸ್ವಾಮೀಜಿಗಳ ಭೇಟಿಗೆ ನಿರ್ಧಾರ

Published 17 ಅಕ್ಟೋಬರ್ 2023, 14:18 IST
Last Updated 17 ಅಕ್ಟೋಬರ್ 2023, 14:18 IST
ಅಕ್ಷರ ಗಾತ್ರ

ಬೀದರ್‌: ಬಸವಧರ್ಮ ಪೀಠದಲ್ಲಿ ನಡೆಯುತ್ತಿರುವ ಒಳಜಗಳ, ವಿವಾದದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಬಸವ ಭಕ್ತರು, ಲಿಂಗಾಯತ ಸಮಾಜದ ಮುಖಂಡರು ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಗರದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಲಿಂಗಾಯತ ಸಮಾಜದ ಹಿರಿಯ ಮುಖಂಡ ಬಸವಕುಮಾರ ಪಾಟೀಲ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆತಯಲ್ಲಿ 40ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಬಸವ ಭಕ್ತರ ಸಮಿತಿ ರಚಿಸಿ, ಇಬ್ಬರು ಸ್ವಾಮೀಜಿಗಳನ್ನು ಭೇಟಿಯಾಗಲು ನಿರ್ಧರಿಸಲಾಯಿತು.

ಬಸವ ಧರ್ಮ ಪೀಠ ಬಸವಾಭಿಮಾನಿಗಳ ಹೆಮ್ಮೆ ಹಾಗೂ ಅಭಿಮಾನದ ಸಂಸ್ಥೆಯಾಗಿದೆ. ಬಸವ ತತ್ವವನ್ನು ಜನ ಮನಕ್ಕೆ ಮುಟ್ಟಿಸುವಲ್ಲಿ ಸಂಸ್ಥೆ ಪಾತ್ರ ಬಹಳ ಮಹತ್ವದ್ದಾಗಿದೆ. ಆದರೆ, ಸಂಸ್ಥೆಯಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳು ಬಸವ ಭಕ್ತರಿಗೆ ನೋವುಂಟು ಮಾಡಿವೆ. ಪೀಠದಲ್ಲಿ ಎರಡು ಗುಂಪುಗಳಾಗಿ ಜಗಳ, ದ್ವೇಷ ಬೆಳೆದು, ವಿವಾದ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲು ಏರಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದರು ಎಂದು ಬಸವಕುಮಾರ ಪಾಟೀಲ ತಿಳಿಸಿದರು.

ಬೀದಿ ಜಗಳ ಹಾಗೂ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವುದರಿಂದ ಬಸವ ತತ್ವ ಪ್ರಚಾರ ಹಾಗೂ ಸಂಘಟನೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಸಮಾಜದ ಹಿತದೃಷ್ಟಿಯಿಂದ ಸ್ವಾಮೀಜಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ದೋಷಾರೋಪಣೆ ಮಾಡುವುದು ನಿಲ್ಲಿಸಬೇಕು. ಜಗಳ ಬಗೆಹರಿಸಿಕೊಳ್ಳಬೇಕು. ಭಕ್ತರಲ್ಲಿನ ಗೊಂದಲ, ಅಪನಂಬಿಕೆ ಹಾಗೂ ಮನಃಸ್ತಾಪ ದೂರ ಮಾಡಿಕೊಳ್ಳಬೇಕು. ಪೀಠದಲ್ಲಿ ಮತ್ತೆ ಶಾಂತಿಯುತ ವಾತಾವರಣ ನೆಲೆಗೊಳ್ಳುವಂತೆ ಮಾಡಬೇಕೆಂದು ಮನವಿ ಮಾಡಿದರು.

ಪ್ರಮುಖರಾದ ಸಿದ್ದಯ್ಯ ಕಾವಡಿ, ನಾಗಯ್ಯ ಸ್ವಾಮಿ, ಶಿವಶರಣಪ್ಪ ವಲ್ಲೇಪುರೆ, ರಾಮಶೆಟ್ಟಿ ಪನ್ನಾಳೆ, ಚಂದ್ರಪ್ಪ ಬಿರಾದಾರ, ಶಿವಶಂಕರ ಟೋಕರೆ, ಬಸವರಾಜ ಪಾಟೀಲ ಶಿವಪುರ, ರವಿ ಶಂಭು ಕೊಳಾರ ವೈಜಿನಾಥ ಬುಟ್ಟೆ, ಶಿವಶಂಕರ ರಾಂಪುರೆ, ಬಸವರಾಜ ರುದ್ರವಾಡಿ, ಮಲ್ಲಿಕಾರ್ಜುನ ಸಂಗಮಕರ್, ಜಗನ್ನಾಥ ಪತಂಗೆ, ಬಸವರಾಜ ಪಾಟೀಲ ಶಿವಪುರ, ಅನಿಲಕುಮಾರ ಪನ್ನಾಳೆ ಮನ್ನಳ್ಳಿ, ಸೋಮನಾಥಪ್ಪ ಅಷ್ಟೂರೆ, ಶಂಭುಲಿಂಗ ಕಾಮಣ್ಣ, ಜಗನ್ನಾಥ ಪತಂಗೆ ಮತ್ತಿತರರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT