ಶುಕ್ರವಾರ, ಜನವರಿ 28, 2022
25 °C

ಭಾಲ್ಕಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಗುರುಕುಲ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಚೇತನ ಮಲ್ಲಿಕಾರ್ಜುನ ರಾಷ್ಟ್ರಮಟ್ಟದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ 21ನೇ ರ್‍ಯಾಂಕ್‌ ಪಡೆದು ಅಪ್ರತಿಮ ಸಾಧನೆಗೈದಿದ್ದಾನೆ. ವಿದ್ಯಾರ್ಥಿನಿ ಅಂಬಿಕಾ ಪಂಡಪ್ಪಾ ಸಹ 195ನೇ ರ್‍ಯಾಂಕ್‌ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳ ವಿವರ: ಸಿದ್ರಾಮೇಶ್ವರ 99.78 ಪರ್ಸೆಂಟೈಲ್‌, ಕೇದಾರ ಸುರೇಶ 99.52, ನಾಗರಾಜ ಹಲಿಮನಿ 99.33, ಪ್ರೇಮಕುಮಾರ ಶಿವಕುಮಾರ 99.32, ಶ್ರೀಧರರೆಡ್ಡಿ ದಿಗಂಬರರೆಡ್ಡಿ 98.47, ಭೀಮಾಶಂಕರ ಹಣಮಂತರಾವ್‌ 97.36, ಬಾಲಗಣೇಶ 97.27, ರೋನಕ ಆರ್‌.ಪಾಟೀಲ 96.76, ಮಂಜುನಾಥ ಸುಭಾಶ 96.74, ತಿಲಕ ವಿಶ್ವನಾಥ 95.72, ಬಸವಪ್ರಜ್ಞಾ ಸಂಗಶೆಟ್ಟಿ 95.70, ವಿಖಿಲೇಶ ಬಿ. 95 ಪರ್ಸೆಂಟೈಲ್‌ ಸೇರಿದಂತೆ ಸುಮಾರು 100 ವಿದ್ಯಾರ್ಥಿಗಳು ಎನ್‌ಐಟಿ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸಂತಸ ವ್ಯಕ್ತಪಡಿಸಿದ್ದಾರೆ.

ಗುರುನಾನಕ ಕಾಲೇಜು:

ಬೀದರ್: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿಯ ಗುರುನಾನಕ ಸ್ವತಂತ್ರ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾಧನೆ
ತೋರಿದ್ದಾರೆ.

ಜಯಪ್ರಕಾಶ ಜಟ್ಟಿಂಗ್ 841ನೇ ಮತ್ತು ಪೃಥ್ವಿರಾಜ ರಾಜಪ್ಪ ಜಮಾದಾರ 898ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜು ಅಧ್ಯಕ್ಷ ಸರ್ದಾರ್ ಬಲಬೀರ್‍ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು