ಕಮಲನಗರ: ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ಹೊರವಲಯದ ಖೇಡ್ ರಸ್ತೆ ಬಳಿಯ ಹೊಲದಲ್ಲಿ ಯುವಕನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ.

ಚ್ಯಾಂಡೇಶ್ವರ ಗ್ರಾಮದ ಗಂಗಶೆಟ್ಟಿ ಅಲಿಯಾಸ್ ಸಾಗರ ಧನರಾಜ ಧಭಾಲೆ (26) ಕೊಲೆಯಾದ ಯುವಕ.

ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ ಗುಂಟಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಕಮಲನಗರ ಸಿಪಿಐ ಅಮರೆಪ್ಪ ಶಿವಬಲ್, ಭಾಲ್ಕಿ ಸಿಪಿಐ ಹಣಮರೆಡ್ಡೆಪ್ಪ, ಕಮಲನಗರ ಪಿಎಸ್ಐ ಚಂದ್ರಶೇಖರ ನಿರ್ಣೆ, ಪಿಎಸ್ಐ ಬಾಲಾಜಿ ಬೆಳಕಟ್ಟೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಮೃತನ ತಂದೆ ಧನರಾಜ ಧಬಾಲೆ ನೀಡಿದ ದೂರಿನನ್ವಯ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆ ಆರೋಪಿ ಶೋಧ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.