ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಕೋಟ: ಸಾಂಸ್ಕೃತಿಕ ಕಾರ್ಯಕ್ರಮ

Last Updated 5 ಜನವರಿ 2023, 5:17 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಕಂಗನಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾವಗಿಯ ರೇವಣಸಿದ್ಧೇಶ್ವರ ಕಲಾ, ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಸಾಂಸ್ಕೃತಿಕ, ಸಂಗೀತ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಭದ್ರೇಶ್ವರ ಮಠದ ಭದ್ರಣ್ಣ ಸ್ವಾಮಿ ಉದ್ಘಾಟಿಸಿ, ಸಂಗೀತದ ಬಗ್ಗೆ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಸಾಹಿತಿ ಎಂ.ಜಿ. ದೇಶಪಾಂಡೆ, ಸಂಘದ ಅಧ್ಯಕ್ಷ ಶಾಂತಕುಮಾರ ಸ್ವಾಮಿ ಮಾತನಾಡಿದರು.

ಕಲಾವಿದರಾದ ಮಲ್ಲಯ್ಯ ಸ್ವಾಮಿ, ಶ್ರೀನಿವಾಸ ಪಾಪಡೆ, ನಾಗಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಸಂಗೀತಾ ಕಂಗನಕೋಟ, ಮಲ್ಲಮ್ಮ ಸ್ವಾಮಿ, ಹಾಗೂ ನಿರ್ಮಲಾ ಶಂಭು ಸಂಗೀತ ಹಾಗೂ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರಾದ ಅವೀರ್ ಸಾವಂತ, ವೀರೇಶ ಶಂಭು, ಸುಭಾಷ್ ಬಿರಾದಾರ, ಸುರೇಶ ಪಾಟೀಲ, ಸಂಗಮೇಶ ಬಿರಾದಾರ, ಶಾಂತಕುಮಾರ ಹಜ್ಜರಗಿ, ಕೃಷ್ಣಬಾಯಿ ಪುಂಡಲೀಕ, ನಯೀಮ್ ಪಟೇಲ್, ರವಿ ಶಂಭು, ಏಕನಾಥ ಅಲ್ಲೂರೆ, ಸಂತೋಷ ತೋರಣ, ಓಂಕಾರ ಉಪ್ಪೆ, ವಿನಯಕುಮಾರ ಸ್ವಾಮಿ, ರಾಜಕುಮಾರ ಪಾಟೀಲ, ಕೇದಾರನಾಥ ಶಂಭೂ ಇದ್ದರು.
ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರ ನಿರೂಪಿಸಿದರು. ಮಹಾನಂದಯ್ಯ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT