ಮಾಂಜ್ರಾ ನದಿ ಒಳಹರಿವು ಹೆಚ್ಚಿದ್ದು ನದಿಪಾತ್ರದ ಗ್ರಾಮಗಳಲ್ಲಿ ಆತಂಕ ವ್ಯಕ್ತವಾಗಿದೆ. ನದಿ ದಂಡೆ ಮೇಲಿರುವ ಕೌಠಾ (ಬಿ), ಕೌಠಾ (ಕೆ), ಗಡಿಕುಶನೂರ, ಇಲ್ಲಾಂಪುರ, ಬಂಪಳ್ಳಿ, ಬಾಚೆಪಳ್ಳಿ, ಹೆಡಗಾಪುರ, ಮಣಿಗೆಂಪುರ ಸೇರಿದಂತೆ ಅನೇಕ ಗ್ರಾಮಗಳ ರೈತರಿಗೆ ಹಾನಿಯಾಗಿದೆ. ನದಿ ದಂಡೆ ಮೇಲಿನ ಹೊಲಗಳಲ್ಲಿನ ಉದ್ದು, ಹೆಸರು, ಸೋಯಾ ಹಾಗೂ ಕಬ್ಬು ನೀರಿನಲ್ಲಿ ಕೊಚ್ಚಿ ಹೋಗಿದೆ. ಹೀಗೆ ಮಳೆಯಾದರೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದರು.