ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಂದು ಕೋರೆಗಾಂವ್ ವಿಜಯೋತ್ಸವ

ಬಸವಕಲ್ಯಾಣದಲ್ಲಿ ಪ್ರಚಾರ ರಥಕ್ಕೆ ಚಾಲನೆ, ಭಿತ್ತಿ ಪತ್ರಗಳ ಬಿಡುಗಡೆ
Last Updated 14 ಜನವರಿ 2020, 10:41 IST
ಅಕ್ಷರ ಗಾತ್ರ

ಬಸವಕಲ್ಯಾಣ: ದಿ ಗ್ರೇಟ್ ಮಹಾರ ಸೇವಾ ಸಮಿತಿ ಆಶ್ರಯದಲ್ಲಿ ಜನವರಿ 23 ರಂದು ತಾಲ್ಲೂಕು ಮಟ್ಟದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಯೋಜಿಸಲಾಗಿದ್ದು, ಸೋಮವಾರ ಸಮಾರಂಭದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು.

ಪಟ್ಟಣ ಠಾಣೆ ಸಿಪಿಐ ಮಲ್ಲಿಕಾರ್ಜುನ ಯಾತನೂರ ಭಾವಚಿತ್ರದ ಪೂಜೆ ನೆರವೇರಿಸಿದರು. ಸಮಿತಿಯ ಗೌರವ ಅಧ್ಯಕ್ಷ ಮನೋಹರ ಮೈಸೆ, ಸಂಸ್ಥಾಪಕ ಪ್ರಕಾಶ ಸುಂಠಾಣೆ, ಸಂಯೋಜಕ ದಿಲೀಪ ಭೋಸ್ಲೆ, ಅಧ್ಯಕ್ಷ ಮನೋಜ್ ದಾದೆ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಾಮನ ಮೈಸಲಗೆ, ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಮಿತಿ ಸದಸ್ಯ ದೀಪಕ ಗಾಯಕವಾಡ, ಹಿರಿಯ ಮುಖಂಡರಾದ ಅರ್ಜುನ ಕನಕ, ಯುವರಾಜ ಭೆಂಡೆ, ಶಶಿಕಾಂತ ಗಾಯಕವಾಡ, ಬಾಬುರಾವ್ ಮದಲವಾಡಾ, ಶರಣು ಸಲಗರ, ಮಿಲಿಂದ್ ಗುರೂಜಿ, ರವಿ ಬೌದ್ಧಾಚಾರ್ಯ, ಪಿಂಟು ಕಾಂಬಳೆ, ಸಂತೋಷ ದಾದೆ, ಅಶೋಕ ಗಾಯಕವಾಡ, ಸಂಜೀವ ಗೋಡಬೋಲೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಪೌರಾಯುಕ್ತ ಸುರೇಶ ಬಬಲಾದ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ನಿಂಗರಾಜ್ ಅರಸ್, ಪ್ರಶಾಂತ ಕೋಟಗೇರಾ, ಪ್ರಿತಂ ಜಾಧವ ಮುಂತಾದವರು ಪಾಲ್ಗೊಂಡಿದ್ದರು.

ಭೀಮಗಾಯನ: ಜನವರಿ 23 ರಂದು ಸಂಜೆ ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಮೊಮ್ಮಗ ರಾಜರತನ್ ಅಂಬೇಡ್ಕರ್ ಭೀಮಾಕೋರೆಗಾಂವ್ ವಿಜಯೋತ್ಸವ ಉದ್ಘಾಟಿಸುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅನಿರುದ್ಧ ವನ್ಕರ್ ಅವರಿಂದ ಭೀಮಗೀತೆಗಳ ಗಾಯನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT