ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಗಾ: ಕೋಟಿಲಿಂಗೇಶ್ವರ ಶಿವ ಶರಣರ ಪ್ರತಿಮೆಗಳ ಭಾವೈಕ್ಯ ತಾಣ

Published 20 ಮೇ 2024, 4:40 IST
Last Updated 20 ಮೇ 2024, 4:40 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಯೋಗಾಶ್ರಮ ಮುಕ್ತಿ ಮಠದಲ್ಲಿಯ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 12ನೇ ಶತಮಾನದಲ್ಲಿ ಬಾಳಿ ಬದುಕಿದ ಎಲ್ಲ ಶಿವ ಶರಣೆಯರ ಪ್ರತಿಮೆಗಳಿದ್ದು, ಭಾವೈಕ್ಯ ತಾಣವಾಗಿ ಬೆಳೆಯುತ್ತಿದೆ.

ಕೋಟಿಲಿಂಗೇಶ್ವರ ದೇವಾಲಯದಲ್ಲಿ ಹಿರಿಯ ಪೀಠಾಧಿಪತಿ ಚನ್ನಮಲ್ಲೇಶ್ವರ ಸ್ವಾಮಿಜಿ ನೇತೃತ್ವದಲ್ಲಿ 12 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪಿಸಿದ್ದು, ದೇಗುಲದಲ್ಲಿಯ ಲಿಂಗ ಮೂರ್ತಿಯ ಆಸು ಪಾಸಿನಲ್ಲಿ 63 ಶಿವ ಶರಣರ, ಅಷ್ಟ ವಿನಾಯಕ ಮೂರ್ತಿಗಳು ನಿರ್ಮಿಸಿದ್ದು, ಭಕ್ತಿಯ ತಾಣದ ಜತೆಗೆ ಪ್ರವಾಸಿ ಕ್ಷೇತ್ರವಾಗಿಯು ಪ್ರಸಿದ್ಧಿ ಪಡೆದಿದೆ.

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳ ಸಂತರ, ಮಹಾತ್ಮರ, ಅಧ್ಯಾತ್ಮ ಸಾಧಕರ ಮೂರ್ತಿಗಳನ್ನೂ ಇಲ್ಲಿ ಕೆತ್ತಲಾಗಿದೆ. 10ನೇ ಶತಮಾನದಿಂದ 21ನೇ ಶತಮಾನದವರೆಗಿನ ಬಹುಪಾಲು ಶಿವಶರಣರ ದರ್ಶನ ಇಲ್ಲಿ ಲಭಿಸುತ್ತದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯದ ಸಮಗ್ರ ಪರಿಚಯವಾಗುತ್ತದೆ, ಹೀಗಾಗಿ ತಾಲ್ಲೂಕಿನೆಲ್ಲೆಡೆಯಿಂದ ವಿದ್ಯಾ ಸಂಸ್ಥೆಯವರು ಪ್ರವಾಸಕ್ಕೆ ಇಲ್ಲಿಗೆ ಬರುವುದುಂಟು.

ದೇವಾಲಯದ ನಾಲ್ಕು ದಿಕ್ಕುಗಳ ಗೋಡೆಗಳು ಶಿವಾರಾಧಕರ ಪ್ರತಿಕೃತಿಗಳಿಂದ ಕಂಗೊಳಿಸುತ್ತಿವೆ. ದೇವಾಲಯದ ಪಕ್ಕದಲ್ಲಿಯೇ 12 ಜ್ಯೋತಿರ್ಲಿಂಗ ದೇವಾಲಯವಿದೆ.

ಮಹಾಶಿವರಾತ್ರಿ, ಮಾಸ ಶಿವರಾತ್ರಿ ಇತರ ಮಹತ್ವದ ದಿನಗಳಂದು ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಸಹಸ್ರಾರು ಬಿಲ್ವಾರ್ಚನೆ, ಕ್ಷೀರಾಭಿಷೇಕ ಪೂಜೆ ಭಕ್ತರಿಂದ ನೆರವೇರುತ್ತದೆ.

'ಮುಕ್ತಿಮಠದ ಕೋಟಿ ಲಿಂಗೇಶ್ವರ ದೇಗುಲದಲ್ಲಿಯ ಶವ ಶರಣರ ಪರಿಚಯ ನೀಡುವ ಪ್ರತಿಮಗಳು ಯುವ ಜನಾಂಗಕ್ಕೆ ವಚನ ಸಾಹಿತ್ಯದ ಜ್ಞಾನ ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ಶರಣ ಅಧ್ಯಯನ ಕೇಂದ್ರ ಸ್ಥಾಪಿಸುವಂತಾದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆʼ ಎಂದು ಮುಕ್ತಿಮಠದ ಪದಾಧಿಕಾರಿ ನೀಲಕಂಠ ಇಸ್ಲಾಂಪುರ್ ಅವರು ಆಗ್ರಹಿಸಿದ್ದಾರೆ.

’ವಿಶಾಲವಾದ ಸ್ಥಳಾವಕಾಶ, ಪ್ರವಾಸಿಗರಿಗೆ ಮೂಲ ಸೌಲಭ್ಯಗಳ ಪೂರೈಕೆ, ವಿಶ್ರಾಂತಿ ನಿಲಯ, ದಾಸೋಹ ಎಲ್ಲವೂ ಒದಗಿಸಲಾಗಿ’ ಎಂದು ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ ಹೇಳಿದರು.

'ಶಿವಸಿದ್ಧ ಶಿವಯೋಗ ಮುಕ್ತಿಮಠದ ಕೋಟಿಲಿಂಗೇಶ್ವರ ದೇವಾಲಯ ಕಲ್ಯಾಣ ಕರ್ನಾಟಕ ಭಾಗದ ಭಕ್ತರಿಗೆ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿದೆ'
ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ, ಪೀಠಾಧಿಪತಿ, ಕೋಟಿಲಿಂಗೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT