ಮಂಗಳವಾರ, ಡಿಸೆಂಬರ್ 1, 2020
17 °C

ಭಾಷೆಯ ಸಂರಕ್ಷಣೆ ಅತ್ಯಗತ್ಯ: ಸುರೇಶ ಚನಶಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಒಂದು ಜನಾಂಗದ ಭಾಷೆ ಯನ್ನು ನಾಶಗೊಳಿಸಿದರೆ, ಸಂಸ್ಕೃತಿ ಯನ್ನೇ ನಾಶಗೊಳಿಸಿದಂತೆ. ಹೀಗಾಗಿ ಇಂದು ಭಾಷೆಯನ್ನು ಸಂರಕ್ಷಿಸಿಕೊಳ್ಳ ಬೇಕಾದ ಅತ್ಯಗತ್ಯವಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶಟ್ಟಿ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಸಾಪ ಮಹಿಳಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ, ಉಪಾಧ್ಯಕ್ಷ ವಿಜಯ ಕುಮಾರ ಗೌರೆ, ತಾಲ್ಲೂಕು ಘಟಕದ ಕೋಶಾಧ್ಯಕ್ಷರಾದ ವೀರಶೆಟ್ಟಿ ಚನಶಟ್ಟಿ, ಸಾಹಿತಿ ಓಂಕಾರ ಪಾಟೀಲ, ಪ್ರಮುಖರಾದ ಆನಂದ ಪಾಟೀಲ, ಸಿದ್ದಾ ರೂಢ ಭಾಲ್ಕೆ, ಅಶೋಕ ದಿಡಗೆ ಇದ್ದರು.

ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ: ನಗರದ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ನಡೆಯುತ್ತಿರುವ ಡಿ.ದೇವರಾಜ್ ಅರಸ ಶಿಕ್ಷಕರ ತರಬೇತಿ ಕೇಂದ್ರ, ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಮಾತೋಶ್ರೀ ಅಹಿಲ್ಯಾಬಾಯಿ ಹೊಳ್ಕರ್ ಪ್ರೌಢ ಶಾಲೆ ಮತ್ತು ಏಕಲವ್ಯ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.

ಸಂಸ್ಥೆ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಡಿ.ದೇವರಾಜ್ ಅರಸ ಶಿಕ್ಷಕರ ತರಬೇತಿ ಕೇಂದ್ರದ ಅಧೀಕ್ಷಕ ವೈಜಿನಾಥ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗಿರಿರಾವ್ ಕುಲಕ0ರ್ಣಿ, ಪ್ರೌಢ ಮತ್ತು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಲಾವೊದ್ದೀನ್ ಇದ್ದರು.

ಗ್ಲೋಬಲ್ ಸೈನಿಕ ಅಕಾಡೆಮಿ: ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ, ಶಿಕ್ಷಕ ವಿಲ್ಸನ್ ಭಾಸ್ಕರ್, ನಿರ್ದೇಶಕ ರಮೇಶ ಪಾಟೀಲ ಸೋಲಪುರ, ಡಾ.ರಘುಕೃಷ್ಣಮೂರ್ತಿ, ಶ್ರೀನಿವಾಸ ವಾಸು, ವಿಮಲಾ ಸಿಕೇನಪುರೆ ಮುಖ್ಯಶಿಕ್ಷಕಿ ಜ್ಯೋತಿ ರಾಗ, ಕಾರಂಜಿ ಸ್ವಾಮಿ, ಮಡೆಪ್ಪ, ಪ್ರಹ್ಲಾದ, ಅಶೋಕ, ಸಚಿನ್ ಇದ್ದರು.

ಕೆ.ಪಿ. ವಿದ್ಯಾ ಸಂಸ್ಥೆ: ಕನ್ಯಿಕಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಧ್ವಜಾರೋಹಣ ಮಾಡಿದರು. ಮುಖ್ಯಶಿಕ್ಷಕರಾದ ವಿಜಯ ಕುಮಾರ ಪಾಟೀಲ ಯರನಳ್ಳಿ, ಸುಲೋಚನಾ ಪಾಟೀಲ, ಆಡಳಿತಾಧಿ ಕಾರಿ ಗುರುರಾಜ್ ಪಾಟೀಲ ಇದ್ದರು.

ಕರ್ನಾಟಕ ಪ್ರಜಾಶಕ್ತಿ ಸಮಿತಿ: ನಗರದ ನೌಬಾದ್‌ನ ಕೆ.ಎಚ್.ಬಿ ಕಾಲೊನಿಯಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಮಿತಿಯ ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಪಾಟೀಲ ಉದ್ಘಾಟಿಸಿದರು.

ಸುಬ್ಬಣ್ಣ ಕರಕನಳ್ಳಿ, ಸೂರ್ಯಕಾಂತ ಸಾಧುರೆ, ಮಲ್ಲಿಕಾರ್ಜುನ ಮೋಳಕೇರ, ಮಹಿಂದ್ರಕುಮಾರ ಹೊಸ ಮನಿ, ವಿಶಾಲಶರ್ಮ, ರಾಜಕುಮಾರ, ಸತೀಶ, ಕಲ್ಲಪ್ಪ ವಾಲದೊಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.