ಬುಧವಾರ, ಜನವರಿ 22, 2020
23 °C

‘ವಕೀಲ ವೃತ್ತಿಯ ಪಾವಿತ್ರ್ಯ ಕಾಪಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ವಕೀಲರ ಸೇವೆ ತುಂಬಾ ಪವಿತ್ರವಾದದ್ದು, ಇದರ ಪವಿತ್ರತೆ ಕಾಪಾಡಿಕೊಂಡು ಹೋಗುವ ಗುರುತರ ಜವಾಬ್ದಾರಿ ವಕೀಲರ ಮೇಲಿದೆ’ ಎಂದು ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೇಳಿದರು.

ಇಲ್ಲಿಯ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಧಾನಪರಿಷತ್‍ ಮಾಜಿ ಉಪ ಸಭಾಪತಿ ಕೇಶವರಾವ ನಿಟ್ಟೂರಕರ್ ಮಾತನಾಡಿ,‘ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವ ವಕೀಲರ ಸೇವೆ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಎನ್. ಬಿ.ಪಾಟೀಲ ಮಾತನಾಡಿ,‘ವಕೀಲರು ವೃತ್ತಿ ನಿಯಮವನ್ನು ಪಾಲಿಸಬೇಕು’ ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ ರಾಚೋಟ್ಟೆ ಮಾತನಾಡಿ,‘ಭಾಲ್ಕಿ ವಕೀಲರ ಸಂಘ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಂಘದ ಸದಸ್ಯರಿಂದ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅನೇಕ ಸೇವೆ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಹೇಳಿದರು.

ಹಿರಿಯ ಶ್ರೇಣಿ ನ್ಯಾಯಾಧೀಶ ಎಮಲಪ್ಪ, ಕಿರಿಯ ಶ್ರೇಣಿ ನ್ಯಾಯಾಧೀಶ ಪ್ರಶಾಂತ ಅವರು ಹಿರಿಯ ವಕೀಲರಾದ ಭೀಮಣ್ಣಾ ಖಂಡ್ರೆ, ಕೇಶವರಾವ್ ನಿಟ್ಟೂರಕರ್, ವಿ.ಜಿ.ತಿವಾರಿ ಅವರನ್ನು ಸನ್ಮಾನಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ರಾಹುಲ್ ಸಾವಳೆ ಹಾಗೂ ಜಂಟಿ ಕಾರ್ಯದರ್ಶಿ ಸಾರಂಗ ಇದ್ದರು. ಶ್ರೀಕಾಂತ ಭೊರಾಳೆ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು