ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರಗಳಿಂದ ಸಮಾಜ ಪರಿವರ್ತನೆ ಆಗಲಿ: ಗುರುನಾಥ್ ಜಾಂತಿಕರ್

Published 7 ಏಪ್ರಿಲ್ 2024, 14:32 IST
Last Updated 7 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ಬೀದರ್: ಒಗ್ಗಟ್ಟಿನ ಮೂಲಕ ಹತ್ತಾರು ಜನರಿಗೆ ಸಂದಿಗ್ಧತೆ ಸಂದರ್ಭದಲ್ಲಿ ಸಹಕರಿಸುವುದೇ ಸಹಕಾರ ಆಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ್ ಜಾಂತಿಕರ್ ತಿಳಿಸಿದರು.

ನಗರದಲಿ ನಡೆದ ವಚನ ಸೌಹಾರ್ದ ಸಹಕಾರ ಸಂಘದ ಶೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿ ಜೊತೆಗೆ ಸಮಾಜ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ್ ರೆಡ್ಡಿ ಯಡಮಲೆ ಮಾತನಾಡಿ, ‘ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿಯ ಆರ್ಥಿಕ ಕ್ರಾಂತಿಗೆ ಹೆಸರುವಾಸಿಯಾಗಿದೆ. ಸ್ವ-ಸಹಾಯ ಸಂಘಗಳು ಇಂದು ದೊಡ್ಡ ಕ್ರಾಂತಿ ಮಾಡಿವೆ. ಸಂಘವು ಸಬಲಗೊಂಡರೆ ಇಡಿ ಶೇರುದಾರರಿಗೆ ಅದರ ಗೌರವ ಸಲ್ಲುತ್ತದೆ. ನಮ್ಮ ಬ್ಯಾಂಕಿನಿಂದ ಬೇಕಾಗುವ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಗಂದಿಗುಡಿ, ರಾಜೇಂದ್ರಕುಮಾರ್ ಗಂದಗೆ, ಶಿವಕುಮಾರ್ ಸಾಲಿ, ಸಿದ್ಧರಾಮೇಶ್ವರ ಸ್ವಾಮೀಜಿ, ವೈಜಿನಾಥ ಸಜ್ಜನಶಟ್ಟಿ, ಸುರೇಶ್ ಪಾಟೀಲ, ಪ್ರಕಾಶ್ ಮಠಪತಿ , ಶಿವಶಂಕರ್ ಟೋಕರೆ, ಜಗನ್ನಾಥ್ ಸೋರಳ್ಳಿ, ಸಂಜೀವ್ ಕುಮಾರ್ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ, ಅಲ್ಲಮಪ್ರಭು ನಾವದಗೇರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT