ಮಂಗಳವಾರ, ಜೂನ್ 28, 2022
26 °C
ಭಾಲ್ಕಿ ಹಿರೇಮಠ ಸಂಸ್ಥಾನ

ಓದುವ ಹವ್ಯಾಸ ಬೆಳೆಸೋಣ:ಶ್ರೀ ಬಸವಲಿಂಗ ಪಟ್ಟದ್ದೇವರು,

ಅಮೃತವಾಣಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮನುಷ್ಯನ ಜೀವನ ಸಕಾರಾತ್ಮವಾಗಿ ಎತ್ತರಕ್ಕೆ ಬೆಳೆಯಬೇಕಾದರೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಮುಖ್ಯ.  ಒಳ್ಳೆಯ ಗ್ರಂಥಗಳು ನಮ್ಮಲ್ಲಿ ಸದ್ಗುಣ ಮೂಡಿಸುತ್ತವೆ. ಮನಸ್ಸು ಭಾವ ಹೃದಯ ಸಂಸ್ಕಾರವಂತರನ್ನಾಗಿ ಮಾಡುತ್ತವೆ. ವಿಶಾಲಭಾವ ಬೆಳೆಸುತ್ತವೆ. ಜ್ಞಾನದ ನಿಧಿ ಹೆಚ್ಚಾಗಿಸುತ್ತದೆ.

‘ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಬೇಕು’ ಎಂದು ಮಹಾತ್ಮರು ಹೇಳುತ್ತಾರೆ. ಇದರರ್ಥ ನಾವು ಬಹಿರಂಗವಾಗಿ ಶೃಂಗಾರ ಮಾಡುವುಕ್ಕಿಂತಲೂ ಆಂತರಿಕವಾಗಿ ಸೌಂದರ್ಯವಂತರಾಗಬೇಕು. ಪುಸ್ತಗಕಗಳು ನಮ್ಮ ಅಂತರಂಗ ಸುಂದರ ಮಾಡುತ್ತವೆ.

‘ಪುಸ್ತಕಗಳು ಜಗತ್ತನ್ನೇ ಆಳುತ್ತವೆ’ ಎಂಬ ಒಂದು ಮಾತು ಇದೆ. ಪುಸ್ತಕವೆಂದರೆ, ಬರೀ ಹಾಳೆ ಅಲ್ಲ. ಅದು ಜ್ಞಾನಸಂಪತ್ತನ್ನು ಒಳಗೊಂಡಿರುವ ಅಮೂಲ್ಯ ನಿಧಿ. ಈ ಜಗತ್ತನ್ನು ಪ್ರೀತಿ, ಮೈತ್ರಿ, ವಿಶ್ವಾಸದಿಂದ ಗೆಲ್ಲಬೇಕಾದರೆ ನಾವು ಜ್ಞಾನ ಸಂಪಾದಿಸಬೇಕು. ಜ್ಞಾನ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡುವ ಉತ್ತಮ ಗೆಳೆಯ ಎಂದರೆ ಪುಸ್ತಕ. ಗ್ರಂಥ ನಮ್ಮ ಬದುಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಉತ್ತಮ ಪುಸ್ತಕ ಓದೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.