ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೂಬಾ ಲಿಂಗಾಯತ ಹೋರಾಟದ ವಿರೋಧಿ: ಓಂಪ್ರಕಾಶ ರೊಟ್ಟೆ

Published 5 ಮೇ 2024, 15:33 IST
Last Updated 5 ಮೇ 2024, 15:33 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿರೋಧಿಯಾಗಿದ್ದು, ಲಿಂಗಾಯತ ಧರ್ಮೀಯರು ಲೋಕಸಭೆ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬಾರದು’ ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮನವಿ ಮಾಡಿದರು.

ಖೂಬಾ ಅವರು ಲಿಂಗಾಯತರ ವಿರೋಧಿಯಷ್ಟೇ ಅಲ್ಲ, ಕೋಮುವಾದಿ, ರೈತವಿರೋಧಿ ಆಗಿದ್ದಾರೆ. ಭಗವಂತ ಖೂಬಾ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ನಾಗಮಾರಪಳ್ಳಿ, ಪ್ರಕಾಶ ಖಂಡ್ರೆ, ಬಸವರಾಜ ಪಾಟೀಲ ಅಷ್ಟೂರ ಕುಟುಂಬ ಮುಗಿಸುವ ಹುನ್ನಾರ ಕೋಮುವಾದಿ ಬಿಜೆಪಿ ಪಕ್ಷ ಮಾಡಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಲಿಂಗಾಯತ ಹೋರಾಟಕ್ಕೆ ಸಂಬಂಧಿಸಿದಂತೆ ಹೈದರಾಬಾದಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಖೂಬಾ ಅವರು ಅಹಂಕಾರದ ಮಾತುಗಳನ್ನು ಆಡಿದ್ದರು. ಅವರಿಗೆ ಜನರ ಹಿತ ಮುಖ್ಯವೇ ಅಲ್ಲ. ಬಿಜೆಪಿ ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿದೆ. ಹಾಗಾಗಿ ಮತದಾರರು ಬೆಂಬಲಿಸಬಾರದು ಎಂದು ಕೋರಿದರು. ಸಿದ್ರಾಮಪ್ಪ ದಾಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT