ಭಾನುವಾರ, ಜೂನ್ 20, 2021
29 °C

ಬೀದರ್‌ ! ತಲ್ವಾರ್ ಹಿಡಿದು ಪೊಲೀಸರನ್ನು ಅಟ್ಟಾಡಿಸಿ ಓಡಿಸಿದ ವ್ಯಕ್ತಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿನ ಓಲ್ಡ್ ಸಿಟಿಯಲ್ಕಿ ಬೆಳಗಿನ ಜಾವ ವ್ಯಕ್ತಿಯೊಬ್ಬ ತಲವಾರ್ ಹಿಡಿದುಕೊಂಡು ಪೊಲೀಸರನ್ನು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ.

ರಸ್ತೆ ಮೇಲೆ ನಿಂತಿದ್ದ ವ್ಯಕ್ತಿಗೆ ಗಸ್ತಿನಲ್ಲಿದ್ದ ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಅದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಕಿ ಇಟ್ಟಿದ್ದ ಹಲವಾರು ತೆಗೆದು ಹೊಡೆಯಲು ಬೆನ್ನಟ್ಟಿದ.

ಗಾಬರಿಗೊಂಡ ಪೊಲೀಸ್ ಕಾನ್ ಸ್ಟೆಬಲ್ ಹೆದರಿ ಕಿರುಚಾಡಿ ಎಸ್ಪಿ ಕಚೇರಿಯತ್ತ ಓಡಿಹೋದರು.  ಕಿರುಚಾಟದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದ ಕೆಲವರು  ವ್ಯಕ್ತಿಯನ್ನು  ಹಿಡಿಯಲು ಯತ್ನಿಸಿದರು. ಆಗ ಅವರ ಮೇಲೂ ಹಲ್ಲೆಗೆ ಯತ್ನಿದ್ದಾನೆ. ಹೀಗಾಗಿ ಜನ ದಿಕ್ಕಾಪಾಲಾಗಿ ಓಡಿದರು.

ಯುವಕರು ಜಿಲ್ಲಾ ಪೊಲೀಸ್ ಅಧಿಕಾರಿಗೆ ನಾಲ್ಕೈದು ಬಾರಿ ಕರೆ ಮಾಡಿದರೂ ಫೋನ್ ರಿಸಿವ್ ಮಾಡಲಿಲ್ಲ. ಜನ ಮತ್ತೆ ಪೊಲೀಸ್ ಠಾಣೆಗೆ ತೆರಳಿದರು. ಟೌನ್ ಪೊಲೀಸರಿಗೂ ಮನವಿ ಮಾಡಿದರು.

ಅಷ್ಟರಲ್ಲಿ ಆತ ಮನೆಗಳ ಮುಂದೆ ನಿಲ್ಕಿಸಿದ್ದ ದ್ವಿಚಕ್ರ ವಾಹನ ಹಾಗೂ ಕಾರಿನ ಗಾಜುಗಳನ್ನು ಒಡೆದು ಹಾಕಿದ. ಇದರಿಂದ ಇನ್ನಷ್ಟು ತ್ವೇಷಮಯ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ಒಬ್ಬ ಧೈರ್ಯ ಮಾಡಿ ಆತನನ್ನು ಹಿಂಬದಿಯಿಂದ ಹಿಡಿದ ಮೇಲೆ ಅಲ್ಲಿ ಸೇರಿದ ಜನ ಆತನ ಕೈಯಿಂದ ತಲವಾರ ಕಿತ್ತು ಕೊಂಡರು. ನಂತರ ಅಲ್ಲಿಗೆ ಪೊಲೀಸರು ಬಂದು ಆತನನ್ನು ವಶಕ್ಕೆ ತೆಗೆದುಕೊಂಡರು.

ಬಕ್ರೀದ್ ದಿನವೇ ಇಂತಹ ಅಹಿತಕರ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು