ತರಕಾರಿ ಒಂದು ರೀತಿಯ ಕಚ್ಚಾ ದಂಧೆ. ಇದನ್ನು ಹೆಚ್ಚು ದಿನ ಸ್ಟಾಕ್ ಮಾಡಲು ಆಗಲ್ಲ.ಬೇಡಿಕೆ ಕುಸಿದು ಸರಕು ಹೆಚ್ಚು ಬಂದರೆ ದರ ಕುಸಿಯುತ್ತದೆ.
–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಶುಂಠಿ ಪ್ರತಿ ಕೆ.ಜಿ ಕನಿಷ್ಠ ₹100ಕ್ಕೆ ಮಾರಾಟವಾದರೆ ರೈತರು ಹಾಕಿದ ಬಂಡವಾಳ ಬರುತ್ತೆ. ಇಲ್ಲವಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಏನೇ ಆದರೂ ರೈತರಿಗೆ ಸಮಸ್ಯೆ.
–ಬಾಬುರಾವ್ ಜೋಳದಾಪಕೆ ಮುಖಂಡ ರೈತ ಸಂಘ
‘ಮಾರುಕಟ್ಟೆ ಏರಿಳಿತ ಕಾರಣ’
‘ತರಕಾರಿಯಲ್ಲಿ ವಿಶೇಷವಾಗಿ ಶುಂಠಿ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಶುಂಠಿಯಲ್ಲಿ ಔಷಧೀಯ ಗುಣವಿದೆ. ವಿವಿಧ ಔಷಧಿ ತಯಾರಿಕೆ ಕಂಪನಿಗಳು ಅದನ್ನು ಖರೀದಿಸುತ್ತವೆ. ಗುಣಮಟ್ಟದ ಶುಂಠಿಗೆ ಮೊದಲ ಆದ್ಯತೆ ನೀಡುತ್ತಾರೆ. ಯಾವುದಾದರೂ ದೇಶದಲ್ಲಿ ಆಯಾ ಕಾಲದಲ್ಲಿ ಉತ್ತಮ ಗುಣಮಟ್ಟದ ಶುಂಠಿ ಸಿಕ್ಕರೆ ಇನ್ನುಳಿದ ದೇಶಗಳಲ್ಲಿ ಅದರ ಬೆಲೆ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಜೀರಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.