ಬೀದರ್: ಫೆಬ್ರುವರಿ 12 ಹಾಗೂ 13ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದಲ್ಲಿ ಪಾಲ್ಗೊಳ್ಳಲು ದೆಹಲಿ ಚಲೋ ಅಭಿಯಾನ ಹಮ್ಮಿಕೊಂಡಿದ್ದು, ಫೆ. 10ರಂದು ಬೀದರ್ನಿಂದ ವಿಶೇಷ ರೈಲು ಬಿಡಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿಯಾನದ ಮುಖಂಡ ಕಪಿಲ್ ಗೋಡಬೋಲೆ ತಿಳಿಸಿದರು.

ಬೌದ್ಧರ ಪವಿತ್ರ ಸ್ಥಳ ಬಿಹಾರದ ಬೋಧಗಯಾ ಮಹಾಬೋಧಿಯನ್ನು ಬೌದ್ಧರಿಗೆ ಹಸ್ತಾಂತರಿಸಬೇಕು. ಇದರ ಆಡಳಿತ ಸಂಪೂರ್ಣ ಬೌದ್ಧರಿಗೆ ವಹಿಸಬೇಕೆನ್ನುವುದು ಪ್ರಮುಖ ಬೇಡಿಕೆಯಾಗಿದ್ದು, ಸರ್ಕಾರದ ಗಮನ ಸೆಳೆಯಲು ನವದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೌದ್ಧ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಬೀದರ್ನಿಂದ 600 ಬೌದ್ಧ ಅನುಯಾಯಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಚಳವಳಿಯಲ್ಲಿ ಪಾಲ್ಗೊಳ್ಳುವರು. ಫೆ. 10ರಂದು ಬೆಳಿಗ್ಗೆ 9ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಇದಾದ ನಂತರ ಬೆಳಿಗ್ಗೆ 11ಕ್ಕೆ ವಿಶೇಷ ರೈಲಿಗೆ ಪೂಜೆ ಸಲ್ಲಿಸಿ, ನವದೆಹಲಿಗೆ ಪಯಣ ಬೆಳೆಸಲಾಗುವುದು. ಫೆ. 14ರಂದು ರೈಲು ನವದೆಹಲಿಯಿಂದ ಬೀದರ್ ಕಡೆಗೆ ಪಯಣ ಬೆಳೆಸಲಿದೆ ಎಂದು ಹೇಳಿದರು.

ನಾಗಮ್ಮ ಪೀರಪ್ಪ ಅವರ ಸ್ಮರಣಾರ್ಥ ಈ ಉಚಿತ ರೈಲಿನ ವ್ಯವಸ್ಥೆ ಮಾಡಲಾಗಿದೆ. ಆದಕಾರಣ ಜಿಲ್ಲೆಯ ಬೌದ್ದ ಅನುಯಾಯಿಗಳು ಹಾಗೂ ಅಂಬೇಡ್ಕರ್ವಾದಿಗಳು ಫೆ. 10ರಂದು ಬೆಳಿಗ್ಗೆ 9ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕೆಂದು ಕೋರಿದರು.

ಭಂತೆ ಕರುಣಾನಂದರು, ಯಶಪಾಲ ಬೋರೆ, ಸುರೇಶ ಜೋಜನಾಕರ್, ಜಗನ್ನಾಥ ಕಾಂಬಳೆ, ಗಂಗಮ್ಮ ಫುಲೆ, ವಿಜಯದಶಮಿ ಗುನ್ನಳ್ಳಿ, ನರಸಿಂಗ್ ಮೀರಾಗಂಜ್, ಶಶಿಧರ ಭಾಸನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.