ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಡಾ.ಚಂದ್ರಶೇಖರ ಪಾಟೀಲ ಭರವಸೆ

Published 31 ಮೇ 2024, 5:34 IST
Last Updated 31 ಮೇ 2024, 5:34 IST
ಅಕ್ಷರ ಗಾತ್ರ
ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ್‌ ಅವರು ಪುನರಾಯ್ಕೆ ಬಯಸಿ ಎರಡನೇ ಬಾರಿಗೆ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ‘ಈ ಸಲ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ನನ್ನ ಗೆಲುವು ಖಚಿತ’ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಚುನಾವಣಾ ಪ್ರಚಾರದ ನಡುವೆ ಬಿಡುವು ಮಾಡಿಕೊಂಡು ಬುಧವಾರ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ
ಪ್ರ

ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ? ಮತದಾರರ ಪ್ರತಿಕ್ರಿಯೆ ಹೇಗಿದೆ?

ಪ್ರಚಾರ ಬಹಳ ಬಿಸಿ ಹಿಡಿದುಕೊಂಡಿದೆ. ಎಲ್ಲ ಕಡೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಔರಾದ್‌ನಿಂದ ಹರಪನಹಳ್ಳಿವರೆಗೆ ಪ್ರಚಾರ ಕೈಗೊಂಡಿದ್ದೇನೆ. ರಾಜ್ಯದಲ್ಲಿ ಜನಪರ ಕಾಂಗ್ರೆಸ್‌ ಸರ್ಕಾರವಿದೆ. ಎನ್‌ಪಿಎಸ್‌ನಿಂದ ಒಪಿಎಸ್‌ ಆಗುತ್ತದೆ ಎಂಬ ವಿಶ್ವಾಸ ಇದೆ. ಎಲ್ಲ ಸರ್ಕಾರಿ ನೌಕರರು ನನಗೆ ಮತ ಹಾಕುವ ಒಲವು ಹೊಂದಿದ್ದಾರೆ.

ಪ್ರ

ಪದವೀಧರರು ನಿಮ್ಮನ್ನು ಪುನರಾಯ್ಕೆ ಮಾಡುವ ವಿಶ್ವಾಸವಿದೆಯೇ?

ಹಿಂದೆ ನಾನು ಚುನಾಯಿತನಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 44 ಜನ ಶಾಸಕರು ಬರುತ್ತಾರೆ. ಅದರಲ್ಲಿ 27 ಕಾಂಗ್ರೆಸ್‌ ಶಾಸಕರು, 8 ಜನ ಸಚಿವರಿದ್ದಾರೆ. ನಮ್ಮ ಸರ್ಕಾರದ ಕೆಲಸದಿಂದ ರಾಜ್ಯದ ಜನ ಸಂತುಷ್ಟರಾಗಿದ್ದಾರೆ. 32 ಸಾವಿರ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆಗಿದೆ. ಅತಿಥಿ ಶಿಕ್ಷಕರ ವೇತನ ಹೆಚ್ಚಿಸಲಾಗಿದೆ. ಇದೆಲ್ಲವೂ ಪರಿಣಾಮ ಬೀರುತ್ತವೆ.

ಪ್ರ

ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ನಿಮ್ಮ ಸ್ಪರ್ಧೆ ಯಾರೊಂದಿಗೆ ಇದೆ ಎಂದು ಅನಿಸುತ್ತದೆ?

ಬಿಜೆಪಿಯ ಅಮರನಾಥ ಪಾಟೀಲ ಅವರೊಂದಿಗೆ ನನ್ನ ನೇರ ಸ್ಪರ್ಧೆ ಇದೆ. ಔರಾದ್‌ನಿಂದ ಹರಪನಹಳ್ಳಿವರೆಗೆ ವಿಸ್ತಾರವಾದ ದೊಡ್ಡ ಕ್ಷೇತ್ರವಿದು. ನೂರಾರು ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೀದರ್‌, ಕಲಬುರಗಿಯಲ್ಲಿ ಹೆಚ್ಚಿನ ಮತದಾರರು ಇದ್ದಾರೆ. ನಾನು ಕೂಡ ಈ ಭಾಗದವನು ಆಗಿರುವುದರಿಂದ ನನಗೆ ಹೆಚ್ಚು ಅನುಕೂಲವಿದೆ. 25 ಸಾವಿರ ಮತದಾರರು ಬೀದರ್‌ನಲ್ಲಿ, 38 ಸಾವಿರ ಕಲಬುರಗಿಯಲ್ಲಿ ಇದ್ದಾರೆ.

ಪ್ರ

ಚುನಾವಣೆಯಲ್ಲಿ ಗೆದ್ದರೆ, ನಿಮ್ಮ ಗುರಿ ಏನಿದೆ?

ಎನ್‌ಪಿಎಸ್‌ನಿಂದ ಒಪಿಎಸ್‌ ಮಾಡುವುದು ಮೊದಲ ಕೆಲಸ. ಅದು ನಮ್ಮ ಪ್ರಣಾಳಿಕೆಯಲ್ಲೂ ಇದೆ. ನಿರುದ್ಯೋಗಿ
ಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಪ್ರಾಮಾಣಿಕವಾಗಿ ಶ್ರಮಿಸುವೆ. ನಾನೊಬ್ಬನೇ ಅಲ್ಲ, ಎಲ್ಲ ಎಂಎಲ್‌ಸಿಗಳ ಜೊತೆ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT