ಬೀದರ್: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಜನವರಿ 31ರಂದು ಸಂಭವಿಸಿದ ಸ್ಫೋಟದಲ್ಲಿ ‘ಸ್ಲೀಪರ್ ಸೆಲ್’ ಹಾಗೂ ಆತಂಕವಾದಿಗಳ ಕೈವಾಡದ ಅನುಮಾನವಿದ್ದು, ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್ಐಎ) ಮಾಡಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಆಗ್ರಹಿಸಿದರು.

ಬೀದರ್ ಜಿಲ್ಲೆಯಲ್ಲಿ ಅನೇಕ ಪೇಟಿಂಗ್ ಮಳಿಗೆಗಳಿವೆ. ಅಲ್ಲಿ ಒಂದು ಸಲವೂ ಸ್ಫೋಟ ಆಗಿಲ್ಲ. ವರ್ಷದ ಹಿಂದೆ ಕೂಡ ಮೋಳಕೇರಾ ಗ್ರಾಮದಲ್ಲಿ ಸ್ಫೋಟ ಸಂಭವಿಸಿತ್ತು. ಒಟ್ಟು ಐದು ಸಲ ಈ ರೀತಿ ಸ್ಫೋಟಗಳು ಆಗಿವೆ. ಹಿಂದೆ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಕಾಲು ಕಳೆದುಕೊಂಡಿದ್ದರು. ಸ್ಫೋಟದ ತೀವ್ರತೆ ಹೆಚ್ಚಿರುವುದರಿಂದಲೇ ಈ ಸಲ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಅನಿಸುತ್ತಿದೆ. ಆದಕಾರಣ ಎನ್ಐಎಯಿಂದ ತನಿಖೆ ಮಾಡಿಸಿದರೆ ಸತ್ಯ ಹೊರಬರುತ್ತದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಅಭಿಪ್ರಾಯ ಪಟ್ಟರು.

ಏನೂ ಮಾಡಿದರೂ ನಡೆಯುತ್ತೆ ಎಂಬ ತುಷ್ಟೀಕರಣದ ಮನಃಸ್ಥಿತಿ ಇದರ ಹಿಂದೆ ಇದ್ದಂತಿದೆ. ನೇರವಾಗಿ ಇದರಲ್ಲಿ ಆತಂಕವಾದಿಗಳು ಭಾಗಿಯಾಗಿರುವ ಶಂಕೆ ಇದೆ. ಮೋಳಕೇರಾ ಗ್ರಾಮದ ವ್ಯಕ್ತಿಯೊಬ್ಬ ನಾನು ಬಾಂಗ್ಲಾದೇಶ, ಪಾಕಿಸ್ತಾನದವನು ಎಂದು ಹೇಳಿಕೊಂಡಿದ್ದಾನೆ. ಇದರ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.