ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೆ ಮುದ ನೀಡುವ ಸಂಗೀತ

ಸಂಗೀತ ಕಾರ್ಯಕ್ರಮದಲ್ಲಿ ಚಂದ್ರಶೇಖರ ಅಭಿಮತ
Last Updated 17 ಫೆಬ್ರುವರಿ 2021, 15:46 IST
ಅಕ್ಷರ ಗಾತ್ರ

ಬೀದರ್: ಸಂಗೀತ ಮನಸ್ಸಿಗೆ ಮುದ ನೀಡುತ್ತದೆ ಎಂದು ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಅಭಿಪ್ರಾಯಪಟ್ಟರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಸಂಗೀತ ಕಲಾ ಮಂಡಲ ವತಿಯಿಂದ ಬಸಂತ ಪಂಚಮಿ ಅಂಗವಾಗಿ ಇಲ್ಲಿಯ ಬಸವ ಮುಕ್ತಿ ಮಂದಿರದಲ್ಲಿ ಇರುವ ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ಉದಯೋನ್ಮುಖ ಕಲಾವಿದರಿಗೆ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಸಂಗೀತ ಆಲಿಕೆ ಆಸಕ್ತಿ ಬೆಳೆಸಿಕೊಳ್ಳಬೇಕು. ಹಾಡುಗಳನ್ನು ಹಾಡಬೇಕು ಎಂದು ಸಲಹೆ ಮಾಡಿದರು.

ಪಶು ಸಂಗೋಪನಾ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಂಭವಿ ಕಲ್ಮಠ, ರೇಣುಕಾ ಮಳ್ಳಿ ವಚನ ಸಂಗೀತ ನಡೆಸಿಕೊಟ್ಟರು. ಕಲಾವಿದ ರೋಷನಕುಮಾರ ರಮೇಶ ಕೋಳಾರ ತಬಲಾ ಸೊಲೊದಲ್ಲಿ ಅನೇಕ ಕಾಯ್ದಾ, ಮುಖಡಾ, ಚಕ್ರಾಧಾರ ಬೋಲ್‍ಗಳನ್ನು ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ರಾಷ್ಟ್ರಮಟ್ಟದ ಸರೆಗಮಪ ಸ್ಪರ್ಧೆಗೆ ಆಯ್ಕೆಯಾದ ಶಿವಾನಿ ಸ್ವಾಮಿ ರಾಗ ಮಾಲಕಂಸ, ಕಿರವಾನಿ ರಾಗ ಪ್ರಸ್ತುತಪಡಿಸಿದರು. ಲಘು ಶಾಸ್ತ್ರೀಯ ಸಂಗೀತದಲ್ಲಿ ವಚನ, ಗಜಲ್, ಭಕ್ತಿ ಗೀತೆ, ಕನ್ನಡ, ಹಿಂದಿ ಹಾಗೂ ಮರಾಠಿ ಹಾಡುಗಳನ್ನು ಹಾಡಿ ರಂಜಿಸಿದರು. ರಾಜೇಂದ್ರಸಿಂಗ್ ಪವಾರ್ ಹಾಗೂ ವಿನಾಯಕ ಚೌಧರಿ ಹಾರ್ಮೋನಿಯಂ ನುಡಿಸಿದರೆ, ರಮೇಶ ಕೊಳಾರ ತಬಲಾ ಸಾಥ್ ನೀಡಿದರು.

ಪ್ರಮುಖರಾದ ಎಸ್.ಆರ್. ಸಂಗಮಕರ್, ರಾಮಕೃಷ್ಣ ಸಾಳೆ, ಸಂಗಮೇಶ ಬಂಪಳ್ಳಿ, ರಘುನಾಥರಾವ್ ಪಂಚಾಳ, ವಿಶ್ವನಾಥ, ವಿ.ಎಂ. ಡಾಕುಳಗಿ, ಕಾಶೀನಾಥರಾವ್ ಕಾಂಬಳೆ, ಶರಣಪ್ಪ ಕಮಠಾಣೆ, ರಾಜೇಶ್ವರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT