ಶನಿವಾರ, ಆಗಸ್ಟ್ 13, 2022
25 °C

ಹಾಲಹಳ್ಳಿ: ಗೈಬು ಸಾಬ್‌ ಉರುಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಲಹಳ್ಳಿ (ಹುಲಸೂರ): ಗ್ರಾಮದಲ್ಲಿ ಶುಕ್ರವಾರ ಗೈಬು ಸಾಬ್‌ ದರ್ಗಾದ ಉರುಸ್ ನಡೆಯಿತು. ಹಾಲಹಳ್ಳಿ ಗ್ರಾಮದ ಹನುಮಾನ ಮಂದಿರದವರೆಗೆ ಮೆರವಣಿಗೆ ನಡೆಯಿತು. ಕಾದರಾಬಾದ್, ರಾಚಪ್ಪಗೌಡಗಾಂವ, ತೋಗಲೂರು ಹಾಗೂ ಹಾಲಹಳ್ಳಿ ಸೇರಿದಂತೆ ಇತರ ಗ್ರಾಮಗಳ ಜನರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.

ಎಲ್ಲ ಸಮುದಾಯಗಳ ಜನರೂ ಭಾಗವಹಿಸಿದ್ದರು. ಎಲ್ಲರೂ ಸೇರಿ ಭಂಕ್ತಿ ಭೋಜನ ಮಾಡಿದರು. ‘ಹಲವು ವರ್ಷಗಳಿಂದ ಎಲ್ಲ ಸಮುದಾಯದವರೂ ಈ ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಉರುಸ್ ಭಾವೈಕ್ಯ ಸಾರುತ್ತದೆ’ ಎಂದು ಭಕ್ತರಾದ ಬಸವರಾಜ ಕುಂಬಾರ ಹಾಗೂ ಉಸ್ಮಾನ್‌ ಸಾಬ ಮುಲ್ಲಾ ತಿಳಿಸಿದರು.ಸೂರ್ಯಕಾಂತ, ಶ್ರೀಶೈಲ, ಶಿವಕುಮಾರ ಪಾಟೀಲ, ಇಸ್ಮಾಲ್ ಮುಲ್ಲಾ, ಸಲಿಂ ಮುಲ್ಲಾ, ವಿದ್ಯಾವಾನ, ಝರಪ್ಪ ಸಾಹು, ಅಮರ ಹಾಗೂ ಪಾಶಾಮಿಯ್ಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.