ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬಿಜೆಪಿಯಿಂದ ಪಾಪನಾಶದಲ್ಲಿ ಭೂಮಿಪೂಜೆ

Published 9 ಸೆಪ್ಟೆಂಬರ್ 2023, 16:20 IST
Last Updated 9 ಸೆಪ್ಟೆಂಬರ್ 2023, 16:20 IST
ಅಕ್ಷರ ಗಾತ್ರ

ಬೀದರ್‌: ನವದೆಹಲಿಯಲ್ಲಿ ನಿರ್ಮಿಸುತ್ತಿರುವ ‘ಕರ್ತವ್ಯ ಪಥ್‌’ಗೆ ದೇಶದ ವಿವಿಧ ಕಡೆಗಳಿಂದ ಮಣ್ಣು ಸಂಗ್ರಹಿಸಿ ಕಳಿಸಿಕೊಡಲು ಹಮ್ಮಿಕೊಂಡಿರುವ ‘ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮ ನಗರದ ಪಾಪನಾಶದಲ್ಲಿ ಶನಿವಾರ ನಡೆಯಿತು.

ಪಾಪನಾಶ ಶಿವಲಿಂಗ ದೇವಸ್ಥಾನದ ಪರಿಸರದಲ್ಲಿ ಭೂಮಿಗೆ ಪೂಜೆ ನೆರವೇರಿಸಿ, ಮಣ್ಣು ಸಂಗ್ರಹಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಧೋನಿ, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ, ಹಿರಿಯ ಮುಖಂಡ ಬಾಬು ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್. ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ರಾಜೇಂದ್ರ ಪೂಜಾರಿ, ರಾಜು ಚಿದ್ರಿ, ಮಹೇಶ್ವರ ಸ್ವಾಮಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT