ನಾಲಾ ಸೇತುವೆಗಳು ಅದರ ನೀರು ಹರಿಯಲು ಟ್ರೆಂಚ್ ನಿರ್ಮಿಸಲಾಗಿದೆ. ರೈತರಿಗೆ ನಡೆದಾಡಲು ಕಚ್ಚಾ ರಸ್ತೆ ಮಾಡಿರುವುದರಿಂದ ಬಹಳ ಅನುಕೂಲವಾಗಿದೆ. 1 ಸಾವಿರ ಎಕರೆ ಕಬ್ಬು ಸಾಗಿಸಲು ನೆರವಾಗಿದೆ.
ಗಿರೀಶ ಗುಂಡೇರಾವ್ ಅಧ್ಯಕ್ಷ ಹೊಕ್ರಾಣ (ಬಿ) ಗ್ರಾ.ಪಂ.
ನಾಲಾ ಸೇತುವೆ ನಿರ್ಮಾಣದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರೈತರಿಗೆ ಬಹಳ ಸಹಾಯವಾಗಿದೆ. ನಿಜಕ್ಕೂ ಇದು ಬಹಳ ಉತ್ತಮವಾದ ಯೋಜನೆ. ರೈತರು ಖುಷಿಯಲ್ಲಿದ್ದಾರೆ.
ಮೀನಾಕ್ಷಿ ಪಾಟೀಲ ಪಿಡಿಒ ಹೊಕ್ರಾಣ (ಬಿ) ಗ್ರಾ.ಪಂ
ಹೊಕ್ರಾಣ (ಬಿ) ಗ್ರಾಮ ಪಂಚಾಯಿತಿಯಲ್ಲಿ ನಾಲಾ ಸೇತುವೆಯ ಉತ್ತಮ ಕೆಲಸವಾಗಿದೆ. ನಿಜಕ್ಕೂ ಇದು ದೊಡ್ಡ ಸಾಧನೆ. ಈ ಸಾಲಿನಲ್ಲಿ ತಾಲ್ಲೂಕು ವ್ಯಾಪ್ತಿಯ ಎಲ್ಲ ಪಂಚಾಯಿತಿಗಳಲ್ಲಿ ಇದನ್ನು ಜಾರಿಗೆ ತರಲಾಗುವುದು.
ಮಾಣಿಕರಾವ್ ಪಾಟೀಲ ಇಒ ಬೀದರ್ ತಾಲ್ಲೂಕು ಪಂಚಾಯಿತಿ
ತೆರಿಗೆ ಸಂಗ್ರಹದಲ್ಲೂ ಸಾಧನೆ
ಹೊಕ್ರಾಣ (ಬಿ) ಗ್ರಾಮ ಪಂಚಾಯಿತಿ ಕಳೆದ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ತೋರಿ ಮೆಚ್ಚುಗೆ ಗಳಿಸಿತ್ತು. ಈ ಸಾಲಿನಲ್ಲಿ ಮೂರು ತಿಂಗಳಲ್ಲಿ ಶೇ 20ರ ಗುರಿ ಮೀರಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ನಿಶ್ಚಿತ ಗುರಿ ಸಾಧಿಸಲಾಗುವುದು ಎಂದು ಪಿಡಿಒ ಮೀನಾಕ್ಷಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಈ ಪಂಚಾಯಿತಿ ಈ ಹಿಂದೆ ಬರೂರ ವ್ಯಾಪ್ತಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದೆ. ನರೇಗಾದಡಿ ಸಾಕಷ್ಟು ಕೆಲಸಗಳಾಗಿವೆ. ಪಂಚಾಯಿತಿ ಹೊಸ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಗೋದಾಮು ಎಸ್‌ಎಚ್‌ಜಿ ಕಟ್ಟಡ ಎರಡು ಅಂಗನವಾಡಿ ಕಟ್ಟಡಗಳು ಕುರಿ ಮತ್ತು ಮೇಕೆ ಶೆಡ್ ನಿರ್ಮಾಣ ಪೂರ್ಣಗೊಂಡಿದ್ದು ಎಲ್ಲರ ಸಹಕಾರದೊಂದಿಗೆ ಮಾದರಿ ಪಂಚಾಯಿತಿ ನಿರ್ಮಿಸುವ ಗುರಿ ಇದೆ ಎಂದು ವಿವರಿಸಿದರು.