ಹುಮನಾಬಾದ್: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಅವಧಿಯಲ್ಲಿ ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಸಲಹೆ ನೀಡಿದರು.

ಪಟ್ಟಣದ ಎಸ್ಬಿಸಿಎಸ್ ಕಲೆ ಮತ್ತು ಎಸ್.ವಿ. ವಾಣಿಜ್ಯ ಹಾಗೂ ವಿಜ್ಞಾನ ಪದವಿ ಕಾಲೇಜಿನಲ್ಲಿ ಕಲ್ಯಾಣ ಸಾಹಿತ್ಯ ಮತ್ತು ಶೈಕ್ಷಣಿಕ ಟ್ರಸ್ಟ್ ಕಲಬುರಗಿ ವತಿಯಿಂದ ಈಚೆಗೆ ನಡೆದ ಸಮಕಾಲೀನ ಸಮಾಜದಲ್ಲಿ ಮಾನವಿಕ, ಸಮಾಜ ವಿಜ್ಞಾನ ಮತ್ತು ವಾಣಿಜ್ಯದ ಪಾತ್ರ ಕುರಿತು ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು. ಅದರ ಜತೆಯಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ತಲೆ ತಗ್ಗಿಸಿ ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಂಡು ಗುರು ಹಿರಿಯರನ್ನು ಗೌರವಿಸಿದರೆ ಭವಿಷ್ಯದಲ್ಲಿ ನಿಮ್ಮ ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಬೀದರ್ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್. ಬಿರಾದಾರ ಮಾತನಾಡಿ, ‘ಬೀದರ್ ವಿವಿಯ ಅಡಿಯಲ್ಲಿ ನಡೆಯುತ್ತಿರುವ ಹುಮನಾಬಾದ್ ಎಸ್ಬಿಸಿಎಸ್ ಮತ್ತು ಎಸ್.ವಿ. ಪದವಿ ಕಾಲೇಜು ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ. ಬೋಧಕರು, ಕ್ರೀಡಾ ಚಟುವಟಿಕೆಗಳ ಆಯೋಜನೆಗೆ ಪೂರಕವಾದ ಆಟದ ಮೈದಾನ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶರಣ ಬಸವೇಶ್ವರ ವಿಶ್ವವಿದ್ಯಾಲಯ ಕುಲಸಚಿವ ಸಣ್ಣ ಬಸವನಗೌಡ ಡೋಳ್ಳೆಗೌಡರ, ಶ್ರೀನಿವಾಸ ವಿ., ರವೀಂದ್ರನಾಥಪ್ಪ ಕೆ., ಉಮಾಕಾಂತ ಪಾಟೀಲ, ಧನುಕುಮಾರ ಅಂಗಡಿ, ಅಶೋಕಕುಮಾರ ಕರಂಜಿ ಗಾದಗಿ, ದೀಪಕ್ ಕಲಬುರ್ಗಿ, ಪ್ರವೀಣ ಕಲಬುರ್ಗಿ, ವಿಕಾಸ, ಮಲ್ಲಪ್ಪ, ಅರವಿಂದ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.