ಮಂಗಳವಾರ, ಜನವರಿ 21, 2020
28 °C

ಬೀದರ್ | ಹಳೆ ವಿದ್ಯಾರ್ಥಿಗಳಿಂದ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಣಿ ಕಿತ್ತೂರ ಚನ್ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಗರದ ವಿದ್ಯಾನಗರ ಕಾಲೊನಿಯ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 130ನೇ ಜಯಂತ್ಯುತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ನಗರಸಭೆ ಮಾಜಿ ಸದಸ್ಯ ರಾಜಾರಾಮ ಚಿಟ್ಟಾ, ಕೃಷಿ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಹಾಗೂ ಪತ್ರಕರ್ತ ಶಶಿಕುಮಾರ ಪಾಟೀಲ ಸಂಗಮ ಜಂಟಿಯಾಗಿ ಡಾ. ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಾ. ಮಹೇಶ ಬಿರಾದಾರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಂಘದ ಶಿವಕುಮಾರ ಭಾಲ್ಕೆ, ಮಹಾರುದ್ರ ನೇಳಗೆ, ಸುರೇಶ ಹಳೆಂಬುರ, ಶಿವಶಂಕರ ಭುಜಂಗೆ, ಸತ್ಯನಾರಾಯಣ, ಮಹಾಂತೇಶ ಚಟ್ನಳ್ಳಿಕರ್, ಬಸವರಾಜ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು