ಗುರುವಾರ , ಅಕ್ಟೋಬರ್ 6, 2022
22 °C

‘ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಕೋವಿಡ್ ವೇಳೆ ಪತ್ರಿಕಾ ವಿತರಕರು ಪ್ರಾಣದ ಹಂಗು ತೊರೆದು ಓದುಗರಿಗೆ ಪತ್ರಿಕೆ ತಲುಪಿಸಿರುವುದು ಶ್ಲಾಘನೀಯ’ ಎಂದು ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ ಹೇಳಿದರು.

ಪಟ್ಟಣದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿ,‘ಓದುಗರು ಪ್ರತಿ ತಿಂಗಳು ವಿತರಕರಿಗೆ ಹಣ ನೀಡಿ ಸಹಕರಿಸಬೇಕು’ ಎಂದರು.

ಹಿರಿಯ ಪತ್ರಿಕಾ ವಿತರಕ ಬಸವರಾಜ ಮಾತನಾಡಿ,‘ಸರ್ಕಾರ ಕೋವಿಡ್ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಸಹಕಾರ ನೀಡಿದೆ. ಪತ್ರಿಕಾ ವಿತರಕರೂ ಸಂಕಷ್ಟಗಳನ್ನು ಎದುರಿಸಿದ್ದೇವೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರದ ಸಂಗತಿ’ ಎಂದರು.

ನಾಗಭೂಷಣ, ರೇವಣಸಿದ್ದಪ್ಪ, ಪ್ರಶಾಂತ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು