ಭಾನುವಾರ, ನವೆಂಬರ್ 29, 2020
22 °C
ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಾಬುರಾವ್ ವಡ್ಡೆ ಮನವಿ

ಕನ್ನಡ ಭವನಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಿ: ಬಾಬುರಾವ್ ವಡ್ಡೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲಾ ಕೇಂದ್ರದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವಂತೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಕನ್ನಡ ಭವನಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕು. ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳುವಂತೆ ಮಾಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಾಬುರಾವ್ ವಡ್ಡೆ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಸಾಹಿತಿ ರಮೇಶ ಬಿರಾದಾರ ಅವರ ನಿವಾಸದಲ್ಲಿ ಆಯೋಜಿಸಿದ್ದ 27ನೇ ‘ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವನ್ನು ಆರಂಭಿಸಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದ ಶ್ರೇಯಸ್ಸು ಹನುಮಂತಪ್ಪ ಪಾಟೀಲ, ಪಂಚಾಕ್ಷರಿ ಪುಣ್ಯಶೆಟ್ಟಿ, ವೀರೇಂದ್ರ ಸಿಂಪಿ, ಜಗನ್ನಾಥ ಹೆಬ್ಬಾಳೆ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಪ್ರಸ್ತುತ ಸುರೇಶ ಚನಶೆಟ್ಟಿ ಅವರ ಸಾರಥ್ಯದಲ್ಲಿ ಕಸಾಪ ಜಿಲ್ಲಾ ಘಟಕವು 50ನೇ ವರ್ಷಾಚರಣೆಯಲ್ಲಿ ತೊಡಗಿದೆ. ಸುವರ್ಣ ಸಂಭ್ರಮದ ಭಾಗವಾಗಿ ‘ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮದ ಮೂಲಕ ಕನ್ನಡ ತೇರು ಎಳೆಯುತಿರುವುದು ಸಂತಸ ಉಂಟು ಮಾಡಿದೆ’ ಎಂದರು.

ಸಾಹಿತಿ ರಮೇಶ ಬಿರಾದಾರ ಮಾತನಾಡಿ, ‘ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಜನ್ಮತಾಳಿ ಬೀದರ್‌ನಲ್ಲಿ ಬಿ.ಎ. ಪದವಿ ಮುಗಿಸಿದೆ. ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ ನನಗೆ ಸಹಜವಾಗಿಯೇ ಸಾಹಿತಿಗಳೊಂದಿಗೆ ಸಂಪರ್ಕ ಸಾಧ್ಯವಾಯಿತು. ಇದರೊಂದಿಗೆ ಸಾಹಿತ್ಯದ ಆಸಕ್ತಿಯೂ ಬೆಳೆಯಿತು’ ಎಂದು ತಿಳಿಸಿದರು.

‘ನನ್ನ ಚೊಚ್ಚಲ ಕವಿತೆ ‘ಸಾಧಿಸೊಣ’ ಬರೆದು ಸಾಹಿತಿ ವೀರೇಂದ್ರ ಸಿಂಪಿ ಅವರ ಕೈಗೆ ನೀಡಿದೆ. ನಂತರ ಅವರ ಗರಡಿಯಲ್ಲಿಯೇ ಬೆಳೆದೆ. ಬೀದರ್‌ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಭಾಗ್ಯ ಒಲಿದು ಬಂದಿತ್ತು. ವೀರೇಂದ್ರ ಸಿಂಪಿ ಅವರು ಭಾಷಣ ಮಾಡಿ ನನ್ನ ಬೆನ್ನು ಚಪ್ಪಚರಿಸಿದ್ದರು’ ಎಂದು ಹೇಳಿದರು.

‘ಸಾಮಾಜ ಸೇವೆ, ಅನ್ಯಾಯದ ವಿರುದ್ಧ ಹೋರಾಟ ಹಾಗೂ ಸಾಹಿತ್ಯ ರಚನೆ ಇದು ನನ್ನ ಬದುಕಿನ ಭಾಗವಾಗಿದೆ. ಬೀದರ್ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘ, ಬೀದರ್ ಜಿಲ್ಲಾ ವಿಕಾಸ ವೇದಿಕೆ ಸಂಘಟನೆಯ ಮೂಲಕ ಹೋರಾಟ ಮಾಡಿದ್ದೇನೆ’ ಎಂದು ತಿಳಿಸಿದರು.

‘2009 ರಲ್ಲಿ ‘ಜೀವನದಿ ಬತ್ತಿದಾಗ’ ಕವನ ಸಂಕಲ, 2016ರಲ್ಲಿ ‘ನೀಲಮ್ಮನ ಬಳಗದ ವಚನಗಳು’ ಪ್ರಕಟವಾಗಿದೆ.
ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಹಿಂದೂ ಕೋಡ್‍ಬಿಲ್ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದೇನೆ.
ಗವಿರನ ತತ್ವದಪದಗಳು, ಪಾಪನಾಶಲಿಂಗನ ವಚನಗಳು, ರಾಮಲಿಂಗನ ತ್ರಿಪದಿಗಳು, ಮಂಜಾವಿಗೆ ಮಂಜು ಕವಿದಾಗ, ಕವನ ಸಂಕಲನ ಮುದ್ರಣಕ್ಕೆ ಸಿದ್ಧವಾಗಿ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ್ ಅಧ್ಯಕ್ಷತೆ ವಹಿಸಿದ್ದರು.

‘ಮೈಸೂರಿಂದ ಸೌಮ್ಯಮೂರ್ತಿ, ಕುಸುಮಾ ಸಾಲಿನ, ಪುಣೆ, ಅನುಸೂಯಾ ಯತೀಶ ನೆಲಮಂಗಲ, ಜಗದೇವಿ ಚಿಟ್ಟಿ ಕಲಬುರಗಿ, ರಾಜ್ ಆಚಾರ್ಯ ಬೆಂಗಳೂರು, ಆಶಾದೇವಿ ಖೂಬಾ ಕಲಬುರ್ಗಿ, ಮೊಸೀನ್ ಬಾಬು ತುಮಕೂರ, ನೂರಜಹಾ ಬೇಗಂ, ಭಾಗ್ಯಲಕ್ಷ್ಮಿ ಶಿವಮೊಗ್ಗ, ಖುಶನಮ್ಮಾ ಜಿ.ಎನ್. ಚಿತ್ರದುರ್ಗ, ರತ್ನ ಸಾಹಿತ್ಯ ಉಡುಪಿ, ವಿಷ್ಣುಕಾಂತ ಬಿ.ಜೆ. ಬೆಂಗಳೂರು, ವೀರೂಪಾಕ್ಷ ಗಾದಗಿ, ಶ್ರೇಯಾ ಮಹೇಂದ್ರಕರ್, ಸಾಧನಾ ರಂಜೋಳಕರ್, ರಾಜೇಶ ಸಿಂಧೆ, ಭಾಲ್ಕಿ ರಾಮಕೃಷ್ಣ ಸಾಳೆ, ಬಿ.ಎ. ದಯಾಸಾಗರ, ಪಾರ್ವತಿ ಸೋನಾರೆ, ಚನ್ನಬಸವ ಹೇಡೆ ಸಂವಾದದಲ್ಲಿ ಭಾಗವಹಿಸಿದ್ದರು.

ಶಿವಕುಮಾರ ಕಟ್ಟೆ, ರಾಮಕೃಷ್ಣ ಸಾಳೆ, ಬಸವರಜ ಬಲ್ಲೂರ, ಟಿ.ಎಂ. ಮಚ್ಛೆ, ಶಂಭುಲಿಂಗ ವಾಲದೊಡ್ಡಿ , ಚನ್ನಪ್ಪ ಸಂಗೋಳಗಿ, ವಿಜಯಕುಮಾರ ಸೋನಾರೆ, ಸಂಜೀವಕುಮಾರ ಅತಿವಾಳೆ, ರಾಜೇಶ್ವರಿ ಶೀಲವಂತ, ಸತ್ಯಮೂರ್ತಿ, ಪ್ರಭು ಮಾಲೆ, ಸುನೀತಾ ಬಿರಾದಾರ, ಸಿದ್ಧಾರೂಢ ಭಾಲ್ಕೆ, ದೇವೇಂದ್ರ ಕರಂಜೆ, ಮಲ್ಲಿಕಾರ್ಜುನ ಟಂಕಸಾಲೆ, ನಾಗಶೆಟ್ಟಿ ಧರಮಪುರ ಪಾಲ್ಗೊಂಡಿದ್ದರು.

ನಿರಂಕಾಂರ ಬಂಡಿ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಿಸಿದರು. ಓಂಪ್ರಕಾಶ ಧಡ್ಡೆ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.