ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶುದ್ಧ ನೀರು: ರೋಗ ಭೀತಿ

Last Updated 10 ಸೆಪ್ಟೆಂಬರ್ 2020, 3:13 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ಹೊರ ವಲಯದಲ್ಲಿರುವ ಕೊಳವೆ ಬಾವಿ ಸುತ್ತ ಕಲುಷಿತ ನೀರು ಸಂಗ್ರಹಗೊಂಡಿದ್ದು, ತಿಪ್ಪೆಗುಂಡಿ, ಹುಲ್ಲುಕಡ್ಡಿ ಬೆಳೆದಿದೆ.

ಈ ಕೊಳವೆ ಬಾವಿಯ ನೀರನ್ನೇ ಜನರು ಸೇವನೆ ಮಾಡಬೇಕಾಗಿರುವುದರಿಂದ ಗ್ರಾಮಸ್ಥರಿಗೆ ರೋಗ ಭಯ ಕಾಡುತ್ತಿದೆ. ಗ್ರಾಮದ ಬಹುತೇಕ ಮನೆಗಳ ನಳಗಳಿಗೆ ಈ ಕೊಳವೆ ಬಾವಿಯೇ ಆಧಾರ ಆಗಿದೆ. ಹಾಗಾಗಿ, ಸಾರ್ವಜನಿಕರು ಕುಡಿಯಲು ಸಹ ಇದೇ ಕೊಳವೆ ಬಾವಿ ನೀರು ಬಳಸುತ್ತಾರೆ. ಈಗ ಮಳೆಗಾಲ ಇರುವುದರಿಂದ ತಿಪ್ಪೆಗುಂಡಿಗಳ ಕಲುಷಿತ ನೀರು ಕೋಳವೆ ಬಾವಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನರಿಗೆ ನಾನಾ ಕಾಯಿಲೆಗಳ ಭಯ ಕಾಡುತ್ತಿದೆ. ಗ್ರಾಮಸ್ಥರು ಕೊರೊನಾ ಭಯಕ್ಕಿಂತ ಹೆಚ್ಚಾಗಿ ಈ ನೀರಿನ ಸೇವನೆಯಿಂದ ಬರಬಹುದಾದ ರೋಗಗಳಿಂದ ಚಿಂತಿತರಾಗಿದ್ದಾರೆ.

ಸಂಬಂಧಪಟ್ಟವರು ಶೀಘ್ರದಲ್ಲಿ ಕಲುಷಿತ ನೀರು, ತಿಪ್ಪೆಗುಂಡಿ, ಹುಲ್ಲುಕಡ್ಡಿ ತೆಗೆಸಿ ಜನರಿಗೆ ಶುದ್ಧ ನೀರು ಸಿಗುವಂತೆ ಮಾಡಬೇಕು ಎಂದು ಗ್ರಾಮಸ್ಥರಾದ ಕಾಶಿನಾಥ ಮರಕಲೆ ಹಾಗೂ ರವಿ ಕುಂಬಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT