ಬೀದರ್: ಇಲ್ಲಿನ ಶಿವನಗರ ಸಿಗ್ನಲ್ ಸಮೀಪದ 'ಲೋಟಸ್ ಸ್ಪಾ' ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು, ವೇಶ್ಯವಾಟಿಕೆಗೆ ದೂಡಿದ ಐವರು ಯುವತಿಯರನ್ನು ರಕ್ಷಿಸಿ, ಇಬ್ಬರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಇಬ್ಬರು, ಅಸ್ಸಾಂ, ಹರಿಯಾಣ ಹಾಗೂ ಮಧ್ಯ ಪ್ರದೇಶ ರಾಜ್ಯದ ತಲಾ ಒಬ್ಬ ಯುವತಿ ಸೇರಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಬೆಳಮಗಿಯ ಕರಣ್ ಹಾಗೂ ಕಲಬುರಗಿ ತಾಲ್ಲೂಕಿನ ಕಾಳಗಿಯ ಸಂದೀಪ್ ಬಂಧಿತರು. ಕರಣ್, ಸ್ಪಾ ಮಾಲೀಕನಾಗಿದ್ದು, ಅವನ ಹೆಸರಿನಲ್ಲಿ ನೋಂದಣಿ ಮಾಡಿಸಿ ನಡೆಸಲಾಗುತ್ತಿದೆ. ಆದರೆ,ಸ್ಪಾಗೆ ಅನ್ಯ ರಾಜ್ಯದ ಯುವತಿಯರನ್ಮು ತಂದು ವೇಶ್ಯವಾಟಿಕೆ ನಡೆಸುತ್ತಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಸೆನ್ ಠಾಣೆಯ ಡಿವೈಎಸ್ಪಿ ಎಸ್.ಎನ್.ಸನದಿ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ್, ಬೀದರ್ ಜಿಲ್ಲಾ ವಿಶೇಷ ಘಟಕ ಹಾಗೂ ಮಹಿಳಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ವೇಶ್ಯವಾಟಿಕೆಗೆ ದೂಡಲಾಗಿದ್ದ ಯುವತಿಯರ ರಕ್ಷಿಸಿ ಇಬ್ಬರ ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.