ಬಸವಕಲ್ಯಾಣ: ತಮ್ಮ ಹೊಲಕ್ಕೆ ದಾರಿ ಒದಗಿಸಲು ಆಗ್ರಹಿಸಿ ತಾಲ್ಲೂಕಿನ ಗೋಕುಳದ ರೈತ ಬಾಬುರಾವ್ ಘೋರವಾಡೆ ಅವರು ಮಂಗಳವಾರ ನಗರದ ತಹಶೀಲ್ದಾರ್ ಕಚೇರಿ ಎದುರಲ್ಲಿ ಧರಣಿ ನಡೆಸಿದರು. ಬಳಿಕ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಸರ್ವೆ ನಂ.58/1 ಮತ್ತು 58/2 ಜಮೀನಿಗೆ ಹೋಗಲು ದಾರಿಯೇ ಇಲ್ಲ. ಸಂಬಂಧಿಕರು ಹೊಲ ಹಂಚಿಕೊಂಡ ನಂತರದಲ್ಲಿ ಈ ಜಮೀನು ನನ್ನ ಪಾಲಿಗೆ ಬಂದಿದೆ. ಅಂದಿನಿಂದ ದಾರಿ ನೀಡುವುದಿಲ್ಲ ಎಂದು ಅವರು ಜಗಳ ತೆಗೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಹೇಳಿದರು.

ನಾನು ಅಂಗವಿಕಲನಾಗಿದ್ದು, ಅನ್ಯ ಕೆಲಸ ಮಾಡಲು ಕಷ್ಟಪಡಬೇಕಾಗುತ್ತದೆ. ಹೀಗಾಗಿ ಈಗಿರುವ ಹೊಲಕ್ಕೆ ದಾರಿಯಿಲ್ಲ. ದಾರಿಗಾಗಿ ಮೇಲಿಂದ ಮೇಲೆ ಜಗಳವಾಗುತ್ತಿದೆ. ಆದರೂ ಸಂಬಂಧಿಸಿದವರು ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಧರಣಿ ಕೈಗೊಂಡಿದ್ದೇನೆ. ಸಮಸ್ಯೆಗೆ ಪರಿಹಾರ ದೊರಕುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.