ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮಾವು, ಪಪ್ಪಾಯಿ ಬೆಳೆಗೆ ಹಾನಿ

Published 15 ಮೇ 2024, 14:39 IST
Last Updated 15 ಮೇ 2024, 14:39 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮಾವು ಹಾಗೂ ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ.

ಚಿಟ್ಟಾವಾಡಿ ಹಾಗೂ ಚಿಟ್ಟಾ ಗ್ರಾಮಗಳಲ್ಲಿ ಹಸಿ ಮಾವಿನ ಕಾಯಿಗಳು ನೆಲಕ್ಕುರುಳಿವೆ. ಪಪ್ಪಾಯಿ ಗಿಡಗಳು ಮುರಿದು ಬಿದ್ದಿವೆ.ಬಿರುಗಾಳಿ ಸಹಿತ ಮಳೆಯಿಂದ ತಮ್ಮ ಹೊಲದಲ್ಲಿನ 60 ಪಪ್ಪಾಯಿ ಗಿಡಗಳು ಮುರಿದಿವೆ. 200 ಗಿಡಗಳ ಮಾವಿನ ಕಾಯಿಗಳು ನೆಲಕ್ಕೆ ಬಿದ್ದಿವೆ. ಅಂದಾಜು ₹ 1.70 ಲಕ್ಷ ನಷ್ಟವಾಗಿದೆ ಎಂದು ಚಿಟ್ಟಾ ಗ್ರಾಮದ ರೈತ ಜಾಫರ್‌ ಮಿಯಾ ತಿಳಿಸಿದರು.

ಮಳೆಯಿಂದಾಗಿ ಮಾವಿನ ಗಿಡಗಳ ಶೇ 40 ರಷ್ಟು ಕಾಯಿಗಳು ನೆಲಕ್ಕೆ ಉರುಳಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಚಿಟ್ಟಾವಾಡಿಯ ದಶರಥ ಮೊರಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT