ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಇಬ್ಬರು ಸಾವು

Published 22 ಏಪ್ರಿಲ್ 2024, 15:54 IST
Last Updated 22 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ.

ಸಿಡಿಲಿಗೆ ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಸೋಮವಾರ ಸಂಜೆ ರೈತ ಸುನಿಲ್ ವಿಜಯಕುಮಾರ ಮಗರೆ (32) ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ಗ್ರಾಮದಲ್ಲಿ ಸಿಡಿಲಿಗೆ ಕಾರ್ಮಿಕ ಚಂದ್ರಕಾಂತ (22) ಮೃತಪಟ್ಟಿದ್ದಾರೆ. ಮೃತ ಚಂದ್ರಕಾಂತ ಅವರು ಚಿಟಗುಪ್ಪ ತಾಲ್ಲೂಕಿನ ಬೇಳಕೇರಾ ಗ್ರಾಮದ ನಿವಾಸಿಯಾಗಿದ್ದರು. ಕೂಲಿ ಕೆಲಸ ಮಾಡುವುದಕ್ಕಾಗಿ ಧುಮ್ಮನಸೂರ್ ಗ್ರಾಮಕ್ಕೆ ಬಂದಿದ್ದರು. ಇವರ ಜೊತೆಗೆ ಕೆಲಸ ಮಾಡುತ್ತಿದ್ದ ಬಸಮ್ಮ ಹಾಗೂ ಶಕುಂತಲಾ ಎಂಬುವವರಿಗೂ ಸಿಡಿಲಿನಿಂದ ಗಾಯಗಳಾಗಿವೆ.

ಬೀದರ್ ನಲ್ಲಿ ಸೋಮವಾರ ರಾತ್ರಿಯೂ ಮುಂದುವರಿದ ಜಿಟಿಜಿಟಿ ಮಳೆ

ಬೀದರ್ ನಲ್ಲಿ ಸೋಮವಾರ ರಾತ್ರಿಯೂ ಮುಂದುವರಿದ ಜಿಟಿಜಿಟಿ ಮಳೆ

ಜಿಲ್ಲೆಯ ಬೀದರ್‌, ಭಾಲ್ಕಿ, ಔರಾದ್‌, ಹುಮನಾಬಾದ್‌, ಹುಲಸೂರ ತಾಲ್ಲೂಕಿನಲ್ಲಿ ಬಿರುಗಾಳಿಯೊಂದಿಗೆ ಬಿರುಸಿನ ಮಳೆಯಾಗಿದೆ. ಮಳೆಯಿಂದ ವಾತಾವರಣ ತಂಪಾಗಿದೆ. ಇನ್ನು, ಸಂಜೆ ಪುನಃ ಶುರುವಾದ ಧಾರಾಕಾರ ಮಳೆ ರಾತ್ರಿ ವರೆಗೂ ಮುಂದುವರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT