ಬುಧವಾರ, ಜೂನ್ 16, 2021
22 °C

ಬೀದರ್ | ನಗರದೆಲ್ಲೆಡೆ ಭರ್ಜರಿ ರಾಖಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಎರಡೂವರೆ ಸಾವಿರಕ್ಕೆ ಸಮೀಪಿಸುತ್ತಿದ್ದರೂ ಹಬ್ಬದ ಸಂಭ್ರಮಕ್ಕೆ ಕೊರತೆ ಉಂಟಾಗಿಲ್ಲ. ನಗರದ ಪ್ರಮುಖ ಸ್ಥಳದಲ್ಲಿ ಭಾನುವಾರ ರಾಖಿಗಳ ಮಾರಾಟ ಭರ್ಜರಿಯಾಗಿದೆ.

ನಗರದ ಮೋಹನ ಮಾರ್ಕೆಟ್, ಅಂಬೇಡ್ಕರ್ ವೃತ್ತ, ಮಡಿವಾಳ ವೃತ್ತ, ಫತ್ಹೇ ದರ್ವಾಜಾ, ಹಾರೂರಗೇರಿ ಕಮಾನ, ಗುಂಪಾ ರಸ್ತೆಯಲ್ಲಿ ತೆರೆದುಕೊಂಡಿರುವ ಅನೇಕ ಅಂಗಡಿಗಳಲ್ಲಿ ಸಹೋದರಿಯರು ರಾಖಿ ಖರೀದಿಸಿದರು.

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಸಹೋದರಿಯರು ಅಂಚೆ ಹಾಗೂ ಕೋರಿಯರ್‌ ಮೂಲಕ ರಾಖಿಗಳನ್ನು ಕಳಿಸಿಕೊಟ್ಟಿದ್ದಾರೆ. ಕೆಲವು ಸಹೋದರರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವ ಕಾರಣ ಹಬ್ಬದ ಸಂಭ್ರಮಕ್ಕೆ ತಡೆ ಉಂಟಾಗಿಲ್ಲ.

ಹೂವುಗಳಿಂದ ಮಾಡಿದ ರಾಖಿಗಳೇ ಮಾರುಕಟ್ಟೆಗೆ ಬಂದಿದೆ. ಬಹುತೇಕ ಜನ ನೂಲಿನ ರಾಖಿಗಳನ್ನೇ ಹೆಚ್ಚಾಗಿ ಖರೀದಿಸಿದರು. ಮಾರುಕಟ್ಟೆಯಲ್ಲಿ ಜನರೇ ಇಲ್ಲದ ಕಾರಣ ಪೈಪೋಟಿ ಇಲ್ಲ. ಹೀಗಾಗಿ ರಾಖಿಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.