ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲೆಡೆ ಮನೆಮಾಡಿದ ರಕ್ಷಾ ಬಂಧನ ಸಂಭ್ರಮ: ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಖಿ

Published 18 ಆಗಸ್ಟ್ 2024, 4:45 IST
Last Updated 18 ಆಗಸ್ಟ್ 2024, 4:45 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಪ್ರಯುಕ್ತ ವಿವಿಧ ಬಗೆಯ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ನೂಲು ಹುಣ್ಣಿಮೆ ದಿನ ಸಹೋದರಿಯರು ತಮ್ಮ ಅಣ್ಣ–ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ರಕ್ಷಣೆ ಮಾಡುವ ಪ್ರತಿಯೊಬ್ಬ ಪುರುಷನಿಗೆ ಸ್ತ್ರೀಯರು ನೂಲಿನ ರೂಪದಲ್ಲಿ ದಾರ, ರಾಖಿ ಕಟ್ಟುವುದು ಸಂಪ್ರದಾಯ.

‘ಪ್ರತಿ ವರ್ಷದಂತೆ ಈ ವರ್ಷ ಅಂಗಡಿಗಳಲ್ಲಿ ವಿವಿಧ ಮಹನೀಯರ ಭಾವಚಿತ್ರವಿರುವ ಆಕರ್ಷಕ ರಾಖಿಗಳು ಮಾರಾಟಕ್ಕೆ ಇಡಲಾಗಿದೆ. ನೂಲಿನ ರಾಖಿ ₹10, ₹20,₹50 ರಿಂದ ₹1 ಸಾವಿರ ಬೆಲೆ ಬಾಳುವ ಬೆಳ್ಳಿಯ ರಾಖಿಗಳು ಕೂಡ ಮಾರಾಟ ಮಾಡಲಾಗುತ್ತಿದೆ’ ಎಂದು ವ್ಯಾಪಾರಿ ಗಣೇಶ ಘನಾತೆ ತಿಳಿಸುತ್ತಾರೆ.

ಸಾಂಪ್ರದಾಯಿಕ ಶೈಲಿಯ ರೇಷ್ಮೆ ರಾಖಿಗೆ ಬೇಡಿಕೆ ಹೆಚ್ಚಿದ್ದು ಸಹಜವಾಗಿಯೇ ಅವುಗಳ ಬೆಲೆಯೂ ದುಬಾರಿಯಾಗಿದೆ. ಬಸವಣ್ಣ, ಅಂಬೇಡ್ಕರ್ , ಶಿವಕುಮಾರ ಸ್ವಾಮೀಜಿ ಸೇರಿದಂತೆ ಇನ್ನಿತರ ಮಹನಿಯರ ಭಾವಚಿತ್ರದ ರಾಖಿ, ಸ್ಟೋನ್‌, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್‌ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಸ್ಪಂಜ್‌, ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹೆಚ್ಚಾಗಿ ಕಾಣುತ್ತಿವೆ. ಮಕ್ಕಳಿಗೆ ಇಷ್ಟವಾಗುವ ನಕ್ಷತ್ರಾಕಾರಾದ ರಾಖಿ ಹೆಚ್ಚಾಗಿ ಮಾರಾಟವಾಗುತ್ತಿದೆ.

ಈಗಾಗಲೇ ದೂರದ ಊರುಗಳಲ್ಲಿರುವ ಸಹೋದರರಿಗೆ ಅಂಚೆ ಮೂಲಕ ಸಹೋದರಿಯರು ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ.

‘ದರ ಏರಿಕೆ ಬಿಸಿ ಮಧ್ಯೆಯೂ ಮಹಿಳೆಯರು, ಯುವತಿಯರು ರಾಖಿ ಖರೀದಿಯಲ್ಲಿ ಹಿಂದೆ ಬೀಳುತ್ತಿಲ್ಲ. ಕಳೆದ ಬಾರಿಗೆ ಹೊಲಿಸಿದರೆ, ಈ ವರ್ಷವೂ ರಾಖಿ ಮಾರಾಟ ಹೆಚ್ಚಾಗಿದೆ. ಬಣ್ಣದ ರಾಖಿಗಳ ಖರೀದಿಗೆ ಮುಗಿಬೀಳುತ್ತಿರುವ ಹೆಣ್ಣು ಮಕ್ಕಳಿಂದ ಫ್ಯಾನ್ಸಿ ಸ್ಟೋರ್‌ಗಳು ಸಂಜೆ ವೇಳೆಗೆ ತುಂಬಿ ಹೋಗುತ್ತಿವೆ’ ಎಂದು ಗ್ರಾಹಕ ಸುಭಾಷ ಕೆನಾಡೆ ಹೇಳುತ್ತಾರೆ.

ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಅಂಗಡಿ ವಿವಿಧ ಬಗೆಯ ರಾಖಿಗಳನ್ನು ಮಾರಾಟಕ್ಕೆ ಇಟ್ಟಿರುವುದು
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಅಂಗಡಿ ವಿವಿಧ ಬಗೆಯ ರಾಖಿಗಳನ್ನು ಮಾರಾಟಕ್ಕೆ ಇಟ್ಟಿರುವುದು
ಶ್ರಾವಣದ ಮೂರನೇ ಸೋಮವಾರ ರಾಖಿ ಹಬ್ಬವಿರುವುದರಿಂದ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಮನೆ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ
ಸುಭಾಷ ಕೆನಾಡೆ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT