ಬುಧವಾರ, ಮಾರ್ಚ್ 29, 2023
32 °C

ದೇಶದ ಸರ್ವಶ್ರೇಷ್ಠ ಧರ್ಮಗ್ರಂಥ ರಾಮಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ದೇಶದ ಸರ್ವಶ್ರೇಷ್ಠ ಧರ್ಮಗ್ರಂಥವಾಗಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಬಣ್ಣಿಸಿದರು.

ತಾಲ್ಲೂಕಿನ ಹೊನ್ನಡ್ಡಿ ಗ್ರಾಮದಲ್ಲಿ ಟೋಕರೆ ಕೋಲಿ ಸಮಾಜ ಸಂಘದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ್ ಮಾತನಾಡಿ, ‘ಯುವಕರು ದುಶ್ವಟಗಳಿಗೆ ಬಲಿಯಾಗದೆ, ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಒತ್ತು ಕೊಟ್ಟಾಗ ಮಾತ್ರ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯ’ ಎಂದರು.

ಹಳ್ಳಿಖೇಡ್ (ಕೆ) ವಾಡಿಯ ಮಹರ್ಷಿ ವಾಲ್ಮೀಕಿ ಆಶ್ರಮದ ದತ್ತಾತ್ರೇಯ ಗುರೂಜಿ ಸಾನಿಧ್ಯ ವಹಿಸಿದ್ದರು. ವಿಠಲಪುರದ ಮಾತೆ ಮಾಣಿಕೇಶ್ವರಿ ಆಶ್ರಮದ ಶಾಂತಿಬಾಬಾ ಹಾಗೂ ಯುವ ಘಟಕದ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿದರು.

ಬೀದರ್ ದಕ್ಷಿಣ ಬಗರ್ ಹುಕುಮ್ ಸಾಗುವಳಿ ಸಕ್ರಮಿಕರಣ ಸಮಿತಿಯ ಸದಸ್ಯ ಸಂಜುಕುಮಾರ ಕೋಲಿ, ಅಂಬಿಗರ ಚೌಡಯ್ಯ ಯುವ ಸೇನೆಯ ದಕ್ಷಿಣ ಕ್ಷೇತ್ರದ ಗೌರವ ಅಧ್ಯಕ್ಷ ಷಣ್ಮುಖ ಶೇಕಾಪುರ್, ಘಾಳೆಪ್ಪ ಚೆಟನಳ್ಳಿ, ಪಿಎಸ್‍ಐ ಸಂಗೀತಾ, ಸಂತೋಷ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷ ವೀರಶೆಟ್ಟಿ ನೇಳಗೆ, ಗ್ರಾಮ ಘಟಕದ ಅಧ್ಯಕ್ಷ ಪ್ರಭು ತಾಳಮಡಗಿ, ಉಪಾಧ್ಯಕ್ಷ ಶಾಂತಕುಮಾರ ತಡಪಳ್ಳಿ, ರಾಜಕುಮಾರ ಔಂಟಿ, ಸಂತೋಷ ಔಂಟಿ, ಪ್ರಕಾಶ ಪುಂಡ್ಲೀಕ್, ಲಕ್ಷ್ಮಣ ಭಂಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.