ಬುಧವಾರ, ಏಪ್ರಿಲ್ 1, 2020
19 °C
ಶೋಷಿತರ ಸಮ್ಮೇಳನದಲ್ಲಿ ಡಾ.ಮೋಹನರಾಜ್ ಕಳವಳ

ಖಾಸಗೀಕರಣದಿಂದ ಮೀಸಲಾತಿ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ:`ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಜಾಣ ನಡೆ ನಡೆಯುತ್ತಿದೆ. ಇದರಿಂದ ದಲಿತರ ಮೀಸಲಾತಿ ಮೊಟಕಾಗುವ ಭಯವಿದೆ' ಎಂದು ಸಾಹಿತಿ ಡಾ.ಮೋಹನರಾಜ್ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೇಲೂರನ ಶರಣ ಉರಿಲಿಂಗ ಪೆದ್ದಿ ಮಠದಲ್ಲಿ ಶಿವಲಿಂಗೇಶ್ವರರ 51 ನೇ ಸ್ಮರಣೋತ್ಸವ ಪ್ರಯುಕ್ತ ಭಾನುವಾರ ನಡೆದ ಶೋಷಿತರ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಶೋಷಿತರು ಶೇ 85ರಷ್ಟು ಇದ್ದಾರೆ. ಆದರೂ ಅವರ ಹಿತಕ್ಕಾಗಿ ಯಾರೂ ಏನೂ ಮಾಡುತ್ತಿಲ್ಲ. ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಂಡು ಸಾಮಾಜಿಕ ನ್ಯಾಯ ನೀಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ’ ಎಂದರು.

ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಘಂಟೆ, ಮಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ಡಾ.ಗವಿಸಿದ್ದಪ್ಪ ಪಾಟೀಲ, ಜೈಭೀಮ ಹೊಳಕೇರಿ, ಕಂಟೆಪ್ಪ ಮದರಗಾಂವ್, ದಶವಂತ ಬಂಡೆ ಮಾತನಾಡಿದರು.

ಸಾಹಿತಿ ಡಾ.ವಸುಂಧರಾ ಭೂಪತಿ ಹಾಗೂ ಡಾ.ಮೋಹನರಾಜ್ ಅವರಿಗೆ ಪ್ರಸಕ್ತ ಸಾಲಿನ `ಶರಣ ಉರಿಲಿಂಗಪೆದ್ದಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಡಾ.ಜಯದೇವಿ ಗಾಯಕವಾಡ, ಡಾ.ಅನುರಾಧಾ ಬಾಲಕೃಷ್ಣ ರಾಠೋಡ, ನಾಗಪ್ಪ ನಿಣ್ಣೆ, ಮಹಾಲಿಂಗ ಪಂಚಾಕ್ಷರಿ, ಸುರೇಶ ಮೋರೆ, ನಿತ್ಯಾನಂದ ಮಂಠಾಳಕರ್, ನವನಾಥ ಬೆಳ್ಳೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು