ಭಾನುವಾರ, ಜೂನ್ 26, 2022
21 °C

100 ಸಸಿ ನೆಟ್ಟ ಸಹಾರಾ ಕ್ರಿಕೆಟ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಯುವಕರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಕಲಬುರ್ಗಿ ಸಬ್ ಇನ್‌ಸ್ಪೆಕ್ಟರ್ ಯುನೂಸ್ ಮಿಯ್ಯಾ ಹೇಳಿದರು.

ತಾಲ್ಲೂಕಿನ ಅಟ್ಟೂರ್ ಗ್ರಾಮದಲ್ಲಿ ಸಹಾರಾ ಕ್ರಿಕೆಟ್ ತಂಡದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಗಿಡ– ಮರಗಳ ನಾಶದಿಂದ ಮಳೆ ಕಡಿಮೆಯಾಗಿದೆ. ತಾಪಮಾನ ಹೆಚ್ಚಿದೆ. ಆಮ್ಲಜನಕದ ಕೊರತೆ ಆಗುತ್ತಿದ್ದು, ನಾನಾ ರೋಗಗಳು ಬರುತ್ತಿವೆ. ಈ ಕಾರಣ ಈಗಲಾದರೂ ಎಚ್ಚೆತ್ತು ಸಸಿ ನೆಡುವಿಕೆ ಕೈಗೊಂಡು ಅರಣ್ಯ ಬೆಳೆಸಬೇಕು’ ಎಂದರು.

ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಮೇಶ ಮುಗಳಿ, ಮಡಿವಾಳ ಪರೀಟ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಿಂಬಾಳೆ, ಶರಣು ಪವಾಡಶೆಟ್ಟಿ, ಶಾಂತಪ್ಪ ಬಿರಬಿಟ್ಟೆ, ಸಚಿನ್‌ ಲೋಖಂಡೆ, ಅಣ್ಣಬಸವ ಪೋಸ್ತೆ, ಅಂಬರೀಶ ನಿಂಬಾಳೆ, ಸಂಜೀವ ಕರಹರಿ, ಅಶೋಕ ರಾಠೋಡ, ಬಲಭೀಮ, ರೇವಣಸಿದ್ದಪ್ಪ ಇದ್ದರು. ಗ್ರಾಮದಲ್ಲಿ 100 ಸಸಿಗಳನ್ನು ನೆಡಲಾಯಿತು.

ಸಸಿ ನೆಡುವಿಕೆ: ತಾಲ್ಲೂಕಿನ ಮಲ್ಲಿಕಾರ್ಜುನ ವಾಡಿಯಲ್ಲಿ ಶನಿವಾರ ನಡೆದ ಪರಿಸರ ದಿನಾಚರಣೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ಹಾಗೂ ಹೊಲಗಳಲ್ಲಿ ಸಸಿಗಳನ್ನು ನೆಡಲಾಯಿತು.

ಮುಖ್ಯಶಿಕ್ಷಕ ಉಮೇಶ ಪುಣೆ, ವಿಷ್ಣುವರ್ಧನ ಪುಣೆ, ಮಚೇಂದ್ರ, ಪ್ರವೀಣ ಪುಣೆ, ಶ್ರೀಕಾಂತ, ಸಂತೋಷ ಹೆಗಡೆ, ಸಾಯಣ್ಣ, ಶ್ರೀಧರ, ಸಾಯನಅಲಿ, ನಾಗಪ್ಪ, ತಿಪ್ಪಣ್ಣ, ಪ್ರಕಾಶ ಜಮಾದಾರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು